Latest

*ಸಿದ್ದರಾಮಯ್ಯ ವಿರುದ್ಧ ಕೋಲಾರದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಿಗೆ BJP ಟಿಕೆಟ್ ಆಫರ್*

ಪ್ರಗತಿವಾಹಿನಿ ಸುದ್ದಿ; ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕೋಲಾರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಾ ರೆಡ್ಡಿ ಅವರಿಗೆ ಟಿಕೆಟ್ ಆಫರ್ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ್ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಕೃಷ್ಣಾ ರೆಡ್ಡಿ ಮನೆಗೆ ಜನವರಿ 25ರಂದು ಸಚಿವ ಡಾ.ಕೆ.ಸುಧಾಕರ್ ಆಗಮಿಸಿದ್ದರು. ಈ ವೇಳೆ ವರ್ತೂರು ಪ್ರಕಾಶ್ ಸಮ್ಮುಖದಲ್ಲಿಯೇ ಕೃಷ್ಣಾ ರೆಡ್ಡಿ ಅವರಿಗೆ ಸಚಿವರು ಟಿಕೆಟ್ ಆಫರ್ ನೀಡಿದ್ದಾರೆ. ನಾವೇ ದುಡ್ಡು ಕೊಡುತ್ತೇವೆ ನೀವು ಚುನಾವಣೆಗೆ ಸ್ಪರ್ಧಿಸಿ ಎಂದು ಹೇಳಿರುವುದಾಗಿ ಶಾಸಕರು ತಿಳಿಸಿದ್ದಾರೆ.

Home add -Advt

ಸಿದ್ದರಾಮಯ್ಯ ವಿರುದ್ಧ ಗೆಲ್ಲುತ್ತೇ ಎಂಬ ನಂಬಿಕೆಯಲ್ಲಿರುವ ಬಿಜೆಪಿ ಕೃಷ್ಣಾ ರೆಡ್ಡಿಗೆ ಟಿಕೆಟ್ ಆಫರ್ ಕೊಟ್ಟಿದ್ದು, ಸಚಿವರು ಕೃಷ್ಣಾ ರೆಡ್ಡಿ ಮನೆಗೆ ಹೋಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕೋಲಾರದಲ್ಲಿ ಗೆಲ್ಲುವುದು ಖಚಿತ ಎಂದು ಹೇಳಿದ್ದಾರೆ. ಒಟ್ಟಾರೆ ಶಾಸಕ ಶ್ರೀನಿವಾಸ್ ಗೌಡ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.

 

*ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಜೈಲುಶಿಕ್ಷೆ ವಿಧಿಸಿ ಕೋರ್ಟ್ ಆದೇಶ*

https://pragati.taskdun.com/bjp-mla-m-p-kumaraswamy4-yearsjail/

Related Articles

Back to top button