Latest

ಏ.5 ರಂದು ಡಾ. ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ತಾಲೂಕ ಆಡಳಿತ, ತಾಲೂಕ ಪಂಚಾಯತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಬೈಲಹೊಂಗಲ ಇವರ  ಸಂಯುಕ್ತಾಶ್ರಯದಲ್ಲಿ ಏ.೫ ರಂದು ಬೆಳಗ್ಗೆ ೧೦ ಗಂಟೆಗೆ ಬೈಲಹೊಂಗಲದ ಹರಳಯ್ಯ ಕಾಲನಿಯ ಹರಳಯ್ಯ ಸಮುದಾಯ ಭವನದಲ್ಲಿ ಡಾ. ಬಾಬು ಜಗಜೀವನರಾಮ್‌ರವರ ೧೧೨ ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಎಂ.ಪಿ. ಮಾರುತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೈಲಹೊಂಗಲ  ತಹಶೀಲ್ದಾರ ಹಾಗೂ ತಾಲೂಕಾ ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷ ಡಾ. ಡಿ.ಎಚ್. ಹೂಗಾರ ಅಧ್ಯಕ್ಷತೆ ವಹಿಸುವರು. ಬೈಲಹೊಂಗಲ ಪೊಲೀಸ್ ಉಪಾಧೀಕ್ಷಕ ಜೆ.ಎಂ. ಕರುಣಾಕರ ಶೆಟ್ಟಿ, ಬೈಲಹೊಂಗಲ ತಾಲೂಕ ಪಂಚಾಯತ ಕಾಯನಿರ್ವಾಹಕ ಅಧಿಕಾರಿ ಸಮೀರ ಮುಲ್ಲಾವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವ ವಿದ್ಯಾಲಯದ ಡಾ. ಬಾಬಾಸಾಹೇಬ ಅಂಬೇಡ್ಕರ ಅಧ್ಯಯನ ಪೀಠದ ನಿರ್ದೇಶಕ ಡಾ. ಚಂದ್ರಕಾಂತ ವಾಘಮಾರೆ ಉಪನ್ಯಾಸ ನೀಡಲಿದ್ದಾರೆ.

Related Articles

Back to top button