ಪ್ರಗತಿವಾಹಿನಿ ಸುದ್ದಿ: ಘಟಪ್ರಭಾ ನದಿಯಲ್ಲಿ ವ್ಯಕ್ತಿ ಕಾರು ಸಮೇತ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ಬಳಿಯ ನಡೆದಿದೆ.
ಕಿರಣ ಲಕ್ಷ್ಮಣ ನಾವಲಗಿ 45 ಮೃತ ದುರ್ದೈವಿ. ಮೃತ ಕಿರಣ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದ ನಿವಾಸಿ. ಬ್ಯೂಟಿ ಪಾರ್ಲರ್ ಉದ್ಯಮ ನಡೆಸುತ್ತಿದ್ದ ಮೃತ ಕಿರಣ್ ಡಿಸೆಂಬರ್ 30ರಂದು ಮನೆಯಲ್ಲಿ ಯಾರಿಗೂ ಹೇಳದೇ ಕಾರು ತೆಗೆದುಕೊಂಡು ತೆರಳಿದ್ದರು. ಉದ್ಯಮದಲ್ಲಿ ನಷ್ಟಗೊಂಡ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ನದಿಯಲ್ಲಿ ಬಿದ್ದಿದ್ದ ಕಾರು ಹಾಗೂ ಶವವನ್ನ ಹೊರತೆಗೆದಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ