Kannada NewsKarnataka NewsNational

*ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಆರು ಜನರ ಸಾವು *

ಪ್ರಗತಿವಾಹಿನಿ ಸುದ್ದಿ: ನಿಯಂತ್ರಣ ತಪ್ಪಿ ಕಾಲುವೆಗೆ ಕಾರು ಉರುಳಿಬಿದ್ದ ಪರಿಣಾಮ ಸ್ಥಳದಲ್ಲೇ ಒಂದೇ ಕುಟುಂಬದ ಆರು ಜನ ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಚಿಂಚಣಿ ಪ್ರದೇಶದಲ್ಲಿ ನಡೆದಿದೆ. 

ಮಂಗಳವಾರ ಮಧ್ಯ ರಾತ್ರಿ ಈ ದುರಂತ ಸಂಭವಿಸಿದ್ದು ಬೆಳಗ್ಗೆ ಬೆಳಕಿಗೆ ಬಂದಿದೆ. ಹುಟ್ಟುಹಬ್ಬದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮನೆಗೆ ವಾಪಸ್ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಈ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ.

ಮೃತರನ್ನು ಸಿವಿಲ್​ ಇಂಜಿನಿಯರ್​ ಜಗನ್ನಾಥ್​ ಪಾಟೀಲ್​​ (60) ಪತ್ನಿ ಸುಜಾತ ಪಾಟೀಲ್​ (55) ಪುತ್ರಿ ಪ್ರಿಯಾಂಕಾ ಖರಾಡೆ (30), ಮೊಮ್ಮಗಳು ಧ್ರುವ (3), ರಾಜೀವಿ 2) ಮತ್ತು ಕಾರ್ತಿಕಿ (1) ಎಂದು ಗುರುತಿಸಲಾಗಿದೆ. ಮತ್ತೋರ್ವ ಪುತ್ರಿ ಸ್ವಪ್ನಲಿ (30) ಎಂಬುವವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. 

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button