Latest

ಲಂಡನ್ ನಲ್ಲಿ ಕದ್ದ ಕಾರು ಪಾಕಿಸ್ತಾನದಲ್ಲಿ ಪತ್ತೆ

ಪ್ರಗತಿವಾಹಿನಿ ಸುದ್ದಿ, ಕರಾಚಿ: ಬ್ರಿಟನ್ ನ ಲಂಡನ್ ನಲ್ಲಿ ಕದ್ದ ಐಷಾರಾಮಿ ಕಾರೊಂದು ಪಾಕಿಸ್ತಾನದಲ್ಲಿ ಪತ್ತೆಯಾಗಿದೆ.

ಕರಾಚಿಯಲ್ಲಿ ಕಸ್ಟಮ್ಸ್ ಇಲಾಖೆ ನಡೆಸಿದ ದಾಳಿಯಲ್ಲಿ ಈ ಕಾರು ಪತ್ತೆಯಾಗಿದೆ. ಕಳುವಾದ ಈ ಬೆಂಟ್ಲಿ ಮಲ್ಸಾನ್ನೆ  ಕಾರು ವಾಹನದ ಬೆಲೆ 300,000 ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 2.3 ಕೋಟಿ ಬೆಲೆಯದಾಗಿದೆ.

Home add -Advt

ಈ ದಂಧೆಯಲ್ಲಿ ಭಾಗಿಯಾಗಿರುವ ಜನರು ಪೂರ್ವ ಯುರೋಪಿಯನ್ ದೇಶದ ಉನ್ನತ ರಾಜತಾಂತ್ರಿಕರ ದಾಖಲೆಗಳನ್ನು ಬಳಸಿಕೊಂಡು ಕಾರನ್ನು ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ಆದರೆ ಕಳ್ಳತನದಲ್ಲಿ ಭಾಗಿಯಾಗಿರುವವರು ಟ್ರೇಸಿಂಗ್ ಟ್ರ್ಯಾಕರ್ ನ್ನು ತೆಗೆದುಹಾಕಲು ಅಥವಾ ಸ್ವಿಚ್ ಆಫ್ ಮಾಡಲು ವಿಫಲರಾಗಿದ್ದಾರೆ. ಇದು ಸುಧಾರಿತ ಟ್ರ್ಯಾಕಿಂಗ್ ಸಿಸ್ಟಮ್ ಮೂಲಕ ವಾಹನದ ನಿಖರವಾದ ಸ್ಥಳವನ್ನು ಕಂಡುಹಿಡಿಯಲು UK ಅಧಿಕಾರಿಗಳಿಗೆ ಸಹಾಯ ಮಾಡಿತು.

ಬಿಯರ್ ಗೆ ಅಸ್ತು ನೀಡಲಿದೆಯಂತೆ ಕತಾರ್ !

 

Related Articles

Back to top button