ಪ್ರಗತಿವಾಹಿನಿ ಸುದ್ದಿ: ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕುಂತೂರು ಕೆರೆಗೆ ಬಿದ್ದ ಪರಿಣಾಮ ಚಾಲಕ ಸೇರಿ ಇಬ್ಬರು ಸಾವನ್ನಪ್ಪಿದ್ದು, ಓರ್ವರನ್ನು ರಕ್ಷಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಬಳಿ ನಡೆದಿದೆ.
ಶುಭಾ ಹಾಗೂ ಕಾರುಚಾಲಕ ಊರ್ಜಿತ್ ಮೃತ ದುರ್ದೈವಿಗಳು. ಮೈಸೂರಿನಲ್ಲಿ ಟೆಲಿಕಾಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶುಭಾ ಹಾಗೂ ರೆಸಾರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮನಿತ್ ಎಂಬುವವರು ಕಾರಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರ ತಪ್ಪಿದ ಕಾರು ಕುಂತೂರು ಕೆರೆಗೆ ಬಿದ್ದಿದೆ.
ಚಾಲಕ ಊರ್ಜಿತ್ ಹಾಗೂ ಶುಭಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನಿತ್ ಕಾರಿನ ಬಾನೆಟ್ ಮೇಲೆ ನಿಂತು ಯಾರಾದರೂ ರಕ್ಷಿಸುವಂತೆ ಕೂಗಿಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮನಿತ್ ನನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಿ ಕಾರು ಚಾಲಕ ಊರ್ಜಿತ್ ಹಾಗೂ ಶುಭಾ ಕಾರಿನಲ್ಲೇ ಕೆರೆಯಲ್ಲಿ ಸಾವನ್ನಪ್ಪಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ