Latest

ಅಧ್ಯಕ್ಷ ಸ್ಥಾನಕ್ಕೇರಿದ ದಿನವೇ ಬಿತ್ತು ಕೇಸ್

ಪ್ರಗತಿವಾಹಿನಿ ಸುದ್ದಿ; ಹೊಸಪೇಟೆ: ಹೊಸಪೇಟೆ ನಗರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಹುದ್ದೆಗೇರಿದ ದಿನವೇ ಕೋವಿಡ್ ನಿಯಮ ಉಲ್ಲಂಘನೆ ಕೇಸ್‌ನ ಬಿಸಿ ತಟ್ಟಿದೆ.

ಹೊಸಪೇಟೆ ನಗರಸಭೆಗೆ ಶುಕ್ರವಾರ ನೂತನ ಅಧ್ಯಕ್ಷ, ಉಪಧ್ಯಕ್ಷರ ಆಯ್ಕೆ ನಡೆದಿತ್ತು. ಅಧ್ಯಕ್ಷರಾಗಿ ಸುಂಕಮ್ಮ ಉಪಾಧ್ಯಕ್ಷರಾಗಿ ಆನಂದ್ ಆಯ್ಕೆಯಾಗಿದ್ದಾರೆ. ಆದರೆ ವಿಜಯೋತ್ಸವ ಆಚರಿಸಲು ಗುಂಪುಗೂಡಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷೆ , ಉಪಾಧ್ಯಕ್ಷ ಸೇರಿದಂತೆ 70 ಜನರಮೇಲೆ ನಗರದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಬಳಿಕ ಕೋವಿಡ್ ನಿಯಮ ಉಲ್ಲಂಘಿಸಿ ವಿಜಯೋತ್ಸವ ಆಚರಿಸಲಾಗಿದೆ. ಮಾಸ್ಕ್ ಹಾಕದೇ ಇರುವುದು, ಸಾಮಾಜಿಕ ಅಂತರ ವಿಲ್ಲದೇ ಮೆರವಣಿಗೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.ತೆರೆದ ವಾಹನದಲ್ಲಿ ಇಬ್ಬರು ನಿಂತು ಮೆರವಣಿಗೆಯ ಮೂಲಕ ವಿಜಯೋತ್ಸವ ಆಚರಿಸಲು ತಮಟೆ ಬಾರಿಸುವ ಮೂಲಕ ಜನರನ್ನು ಸೇರಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತುಮಕೂರು ಜಿಲ್ಲೆಯೇನು ನಿಮ್ಮಪ್ಪನ ಜಹಗೀರಾ? ವಿನಾಶಕಾಲೇ ವಿಪರೀತ ಸುಳ್ಳು; ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ಕಿಡಿ

Home add -Advt

Related Articles

Back to top button