GIT add 2024-1
Beereshwara 33

*ಶಂಭು ಕಲ್ಲೋಳಕರ ಹಾಗೂ 500 ಬೆಂಬಲಿಗರ ಮೇಲೆ ಕೇಸ್ ದಾಖಲು* 

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಅವುಜೀಕರ ಧ್ಯಾನ ಯೋಗಾಶ್ರಮದ ಮಠದಲ್ಲಿ ಅಕ್ರಮವಾಗಿ ನುಗ್ಗಿ ಧಾಂದಲೆ ನಡೆಸಿರುವ ಹಿನ್ನೆಲೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಸೇರಿದಂತೆ 501 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಹುಕ್ಕೇರಿ ಬಳಿಯ ಅವುಜೀಕರ ಧ್ಯಾನ ಯೋಗಾಶ್ರಮದಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಮತ್ತು ಅವರ ನೂರಾರು ಕಾರ್ಯಕರ್ತರು ಏಕಾಏಕಿಯಾಗಿ ನುಗ್ಗಿ ಧಾಂದಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಭು ಕಲ್ಲೋಳಕರ ಮತ್ತು 500 ಜನರ ಮೇಲೆ ಆಶ್ರಮ ಮಠದ ಮಲ್ಲೇಶ್ವರ ಮಹಾರಾಜರು ದೂರು ದಾಖಲಿಸಿದ್ದು ತನಿಖೆ ಮುಂದುವರೆದಿದೆ. 

Emergency Service

ಪ್ರಮುಖ ಆರೋಪಿ ಕಲ್ಲೋಳಕರ ಮತ್ತು ಅವರ ಕಾರ್ಯಕರ್ತರು ಕಾನೂನು ಬಾಹಿರ ಸಭೆ ಸೇರಿರುವುದು, ಗಲಭೆಯಲ್ಲಿ ಭಾಗಿಯಾಗಿರುವುದು, ದೊಂಬಿಗೆ ಯತ್ನ, ಉದ್ದೇಶಪೂರ್ವಕವಾಗಿ ಗುಂಪುಗೂಡಿರುವುದು, ಸಾದಾ ಸ್ವರೂಪ ಗಾಯಪಡಿಸಿರುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

ಅವುಜೀಕರ ಆಶ್ರಮದ ಮೇಲೆ ಏಕಾಏಕಿ ನುಗ್ಗಿದ ಕಲ್ಲೋಳಕರ ಹಾಗೂ ಅವರ ಬೆಂಬಲಿತ ಕಾರ್ಯಕರ್ತರು ವಿಚಿತ್ರವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ‌. ಭಾರತೀಯ ದಂಡ ಸಂಹಿತೆ ಕಲಂ 143, 147, 323 ಸಹ ಕಲಂ 504, 149 ರ ಅನ್ವಯ ದೂರು ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ. 

Laxmi Tai add
Bottom Add3
Bottom Ad 2