
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಜಾತಿಗಣತಿ ಕೈಗೊಂಡಿದ್ದು, ಗಣತಿದಾರರಿಗೆ ನಾನು ಯಾವುದೇ ಮಾಹಿತಿ ಕೊಡಲ್ಲ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಜಾತಿಗಣತಿ ಮೂಲಕ ಡಾಟಾವನ್ನು ಮಾರಿಕೊಳ್ಳುವಷ್ಟು ದರಿದ್ರ ಪಕ್ಷ ಕಾಂಗ್ರೆಸ್ ಪಕ್ಷ. ಜಾತಿ ಜನಗಣತಿ ಡಾಟಾ ಲೀಕ್ ಮಾಡಲಾಗ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಮೊದಲ ಬಾರಿ ಕೈಗೊಂಡ ಸಮೀಕ್ಷೆಯ ವರದಿ ಅಂಗೀಕರಿಸಲಿಲ್ಲ. 2023ರ ವರದಿ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿಯೇ ಬಣಗಳಾದವು. 175 ಕೋಟಿ ರೂಪಾಯಿ ಹಣವನ್ನು ನೀರಲ್ಲಿ ಹಾಕಿ ಹೋಮ ಮಾಡಿದ್ದಾರೆ.
‘ಹೈಕೋರ್ಟ್ ಕಡ್ಡಾಯವಾಗಿ ಸಮೀಕ್ಷೆ ಮಾಡಬೇಕು ಅಂತ ಹೇಳಿಲ್ಲ. ಆದರೆ ಕಡ್ಡಾಯವಾಗಿ ಮಾಡುವಂತೆ ಸಿಬ್ಬಂದಿಗೆ ಹೆದರಿಸಲಾಗ್ತಿದೆ. ಮೊದಲು ಮಾಡಿದ ಸರ್ವೆ ಮಾಹಿತಿ ಎಲ್ಲರ ಬಳಿಯೂ ಇದೆ. ಹೀಗಾಗಿ ನಾನು ಯಾವುದೇ ರೀತಿಯ ಮಾಹಿತಿ ಕೊಡಲ್ಲ. ನಮ್ಮ ಮನೆಯವೂ ಮಾಹಿತಿ ಹಂಚಿಕೊಳ್ಳಲ್ಲ ಎಂದು ವಾಗ್ದಾಳಿ ನಡೆಸಿದರು.