Politics

*ಜಾತಿ ಗಣತಿ ವರದಿ ನಾಳೆ ಕ್ಯಾಬಿನೆಟ್‌ನಲ್ಲೇ ಓಪನ್: ಗೃಹ ಸಚಿವ ಜಿ ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ : ಜಾತಿ ಗಣತಿ ವರದಿಯನ್ನು ನಾಳೆ ಕ್ಯಾಬಿನೆಟ್‌ನಲ್ಲೇ ಓಪನ್ ಮಾಡಲಾಗುತ್ತದೆ. ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ಸಂಪುಟದಲ್ಲೇ ಸೀಲ್ ಕವರ್ ಓಪನ್ ಮಾಡಬೇಕು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಸದಾಶಿವನಗರದಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿಯನ್ನು ಸೀಲ್ಡ್ ಮಾಡಲಾಗಿರುತ್ತದೆ. ಅದನ್ನು ಬೇರೆಡೆ ಮಾಡೋದು ಬೇಡ ಅಂತ ಇದೆ. ಕ್ಯಾಬಿನೆಟ್ ನಲ್ಲೇ ಅದನ್ನು ಓಪನ್ ಮಾಡಬೇಕು. ಹಾಗಾಗಿ ನಾಳೆ ಕ್ಯಾಬಿನೆಟ್ ನಲ್ಲೇ ಓಪನ್ ಮಾಡುತ್ತಾರೆ. ಅಲ್ಲಿ ಚರ್ಚೆಯಾಗುತ್ತದೆ ಎಂದರು.

160 ಕೋಟಿ ರೂ. ಖರ್ಚು ಮಾಡಿ ವರದಿ ತಯಾರಾಗಿದೆ. ಅದು ಸಾರ್ವಜನಿಕರ ತೆರಿಗೆ ಹಣ ಅಲ್ಲವೇ? ಹೀಗಾಗಿ ಹಣ ಖರ್ಚು ಮಾಡಿದ ಸಮ್ಮುಖದಲ್ಲೇ ಹೊರ ತರಬೇಕು. ನಂತರ ವರದಿ ಚರ್ಚೆಯಾಗಬೇಕು. ಬಳಿಕ ಈ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button