Latest

ಲಿಂಗರಾಜ ಬಿಬಿಎ ತಂಡಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನಗರದ ಜಿಎಸ್‌ಎಸ್ ಕಾಲೇಜಿನಲ್ಲಿ ನಡೆದ ’ಸೃಜನ-೨೦೧೯’ ಸ್ಪರ್ಧೆಯಲ್ಲಿ ಕೆಎಲ್‌ಇ ಲಿಂಗರಾಜ ಮಹಾವಿದ್ಯಾಲಯ ತಂಡವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಶೃತಿ ಹಂಗಿರಗೇಕರ ಹಾಗೂ ಕಿರಣ ಪಾಟೀಲ ಶಬ್ದ ಸಮರ (ಸಂವಹನ) ವಿಭಾಗದಲ್ಲಿ ಪ್ರಥಮ, ಮೆಹುಲ್ ಪೋರವಾಲ ಹಾಗೂ ಮಹೇಂದ್ರ ಗೌಡ ಪ್ರಸ್ತುತಿ, ರಸಪ್ರಶ್ನೆ ವಿಭಾಗದಲ್ಲಿ ಪ್ರಥಮ, ಸುಬ್ರಮಣ್ಯ ಕಲಾಲ ಛಾಯಾಗ್ರಹಣ ವಿಭಾಗದಲ್ಲಿ ದ್ವಿತೀಯ ಮತ್ತು ತಂಡ ಸ್ಪರ್ಧೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ತಂಡದ ಸಾಧನೆಗೆ ಪ್ರೊ. ಪಿ.ಆರ್. ಕಡಕೋಳ ಹಾಗೂ ಪ್ರಾಧ್ಯಾಪಕ ಬಳಗವು ಅಭಿನಂದಿಸಿದೆ.

Related Articles

Back to top button