LatestUncategorized

*ಭೀಕರ ಅಪಘಾತ: ಖ್ಯಾತ ಯಕ್ಷಗಾನ ಭಾಗವತ ತಿಮ್ಮಪ್ಪ ಹೆಗಡೆ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಯಲ್ಲಾಪುರ: ಯಕ್ಷಗಾನದ ಹಿರಿಯ ಅನುಭವಿ ಭಾಗವತರು ತಿಮ್ಮಪ್ಪ ಹೆಗಡೆ ಬಾಳೇಹದ್ದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ನಿನ್ನೆ ರಾತ್ರಿ ಶಿರಸಿ-ಯಲ್ಲಾಪುರ ರಾಜ್ಯ ಹೆದ್ದಾರಿಯಯ ಹಿತ್ಲಳ್ಳಿ ಕ್ರಾಸ್ ಬಳಿ ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ತಿಮ್ಮಪ್ಪ ಹೆಗಡೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Home add -Advt

ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಯಕ್ಷಗಾನ ಮಟ್ಟು ಮತ್ತು ರಾಗಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದ ತಿಮ್ಮಪ್ಪ ಹೆಗಡೆ ಅಗಲಿಕೆಗೆ ಯಕ್ಷಗಾನ ಕಲಾವಿದರು ಕಂಬನಿ ಮಿಡಿದಿದ್ದಾರೆ. ತಿಮ್ಮಪ್ಪ ಹೆಗಡೆ ನಿಧನ ಯಕ್ಷ ಲೋಕಕ್ಕೆ ತುಂಬಲಾರದ ನಷ್ಟ.

*ಜನಾರ್ಧನ ರೆಡ್ಡಿ ರಾಜಕಾರಣಕ್ಕೆ ಮುನ್ನುಡಿಯಾಗಲಿದೆಯಾ ನೂತನ ಮನೆ ಗೃಹ ಪ್ರವೇಶ?*

https://pragati.taskdun.com/janardhana-reddyghuhapraveshagangavatikoppala/

Related Articles

Back to top button