Latest

ಡಾ. ಪೂರ್ಣಿಮಾ ಚರಂತಿಮಠಗೆ ಮಹಿಳಾ ಸಾಧಕಿ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ರಾಜ್ಯ ಶಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಕೆಎಲ್‌ಎಸ್ ಐಎಂಇಆರ್ ಸಂಸ್ಥೆಯ ಪ್ರೊ. ಡಾ. ಪೂರ್ಣಿಮಾ ಚರಂತಿಮಠ ಅವರಿಗೆ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Home add -Advt

ಇಂಜಿನಿಯರಿಂಗ್ ಹಾಗೂ ವ್ಯವಸ್ಥಾಪನಾ ಶಿಕ್ಷಣ ಕ್ಷೇತ್ರದಲ್ಲಿನ ಅವರ ಕೊಡುಗೆ ಪರಿಗಣಿಸಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ಡಾ. ಪೂರ್ಣಿಮಾ ಚರಂತಿಮಠ ಅವರು ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಬೆಳಗಾವಿ ಶಾಖೆ ಸದಸ್ಯರಾಗಿದ್ದು, ಈ ಹಿಂದೆ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರು ಜಪಾನ್ ಸರ್ಕಾರ ಕೊಡಮಾಡುವ ಅಸೋಸಿಯೇಶನ್ ಆಫ್ ಓವರಸೀಸ್ ಸ್ಕಾಲರ್‌ಶಿಪ್‌ಗೆ ಪಾತ್ರರಾಗಿ ಜಪಾನ್‌ನ ಓಸಾಕಾದಲ್ಲಿ ’ದಿ ಪ್ರೋಗ್ರಾಮ್ ಆನ್ ಕಾರ್ಪೋರೇಟ್ ಮ್ಯಾನೇಜಮೆಂಟ್ ಫಾರ್ ಎಕ್ಸಿಕ್ಯೂಟೀವ್ಸ’ ಪೂರ್ಣಗೊಳಿಸಿದ್ದಾರೆ. ಬೆಳಗಾವಿಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಚರಂತಿಮಠ ಅವರನ್ನು ಸಾಧಕ ಇಂಜಿನಿಯರ್ ಎಂದೂ ಹಾಗೂ ಬೆಳಗಾವಿ ರೌಂಡ್ ಟೇಬಲ್ ಸಂಸ್ಥೆ ವರ್ಷದ ಸಾಧಕಿ ಎಂದು ಗೌರವಿಸಿವೆ. ಯುವಕರಲ್ಲಿ ಉದ್ಯಮಶೀಲತೆ ಬೆಳೆಸುತ್ತಿರುವ ಮ್ಯಾನೇಜಮೆಂಟ್ ಶಿಕ್ಷಕರಲ್ಲಿ ಮೊದಲಿಗರು ಎಂದು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಗುರುತಿಸಿ ಪ್ರಶಸ್ತಿಯಿಂದ ಸನ್ಮಾನಿಸಿದೆ. ಡಾ. ಪೂರ್ಣಿಮಾ ಚರಂತಿಮಠ ಲೇಖಕಿಯೂ ಆಗಿದ್ದು, ಅವರ ಟಿಕ್ಯೂಎಂ (ಟೋಟಲ್ ಕ್ವಾಲಿಟಿ ಮ್ಯನೇಜಮೆಂಟ್) ಹಾಗೂ ಉದ್ಯಮಶೀಲತೆ ಆಭಿವೃದ್ಧಿ ಕುರಿತ ಪುಸ್ತಕಗಳನ್ನು ಪಿಯರಸನ್ ಎಜ್ಯುಕೇಶನ್ ಸಂಸ್ಥೆ ಪ್ರಕಟಿಸಿದೆ.

Related Articles

Back to top button