Kannada NewsKarnataka NewsLatest

*ಕಾವೇರಿ ನದಿಯಲ್ಲಿ ಒಳ ಹರಿವು; ರಾಜ್ಯ ಸರ್ಕಾರ ನಿರಾಳ*

ಪ್ರಗತಿವಾಹಿನಿ ಸುದ್ದಿ; ಶ್ರೀರಂಗಪಟ್ಟಣ: ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ (ಆರ್‌ಎಸ್‌ಎಸ್) ಅಣೆಕಟ್ಟೆಗೆ ಒಳಹರಿವು ಹೆಚ್ಚಿದ್ದು, ಬುಧವಾರ ಬೆಳಗ್ಗೆ ಅಣೆಕಟ್ಟೆಯ ನೀರಿನ ಮಟ್ಟ 100 ಅಡಿಯ ಗಡಿ ತಲುಪಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡಲು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿತ್ತು. ಸ್ಯಾಂಡಲ್ ವುಡ್ ಒಳಗೊಂಡಂತೆ,ಜನರು ಹೋರಾಟಕ್ಕಿಳಿದಿದ್ದರು. ಆದರೆ ಈಗ ನದಿಯಲ್ಲಿ ಒಳಹರಿವು ಹೆಚ್ಚಿದ್ದು ಡ್ಯಾಮ್ ಭರ್ತಿಯಾಗುವತ್ತ ಸಾಗುತ್ತಿದೆ. ಇದರಿಂದ ಸರ್ಕಾರ ಕೊಂಚ ನೀರಾಳವಾಗಿದೆ. ಅಕ್ಟೋಬರ್ 4ಕ್ಕೆ ಅಣೆಕಟ್ಟಿನ ನೀರಿನ ಮಟ್ಟ 100.36 ಅಡಿಗಳಷ್ಟಿದ್ದು, ಗರಿಷ್ಠ ಮಟ್ಟ 124.80 ಅಡಿಗಳು.ಸಧ್ಯಕ್ಕೆ ಒಳಹರಿವು 9,052 ಕ್ಯೂಸೆಕ್ ಮತ್ತು ಹೊರಹರಿವು 1,482 ಕ್ಯೂಸೆಕ್ (ಕಾಲುವೆಗಳು ಸಹ) ಇದೆ.

Home add -Advt

Related Articles

Back to top button