Kannada NewsLatest

ಆರ್ ಸಿಯು ಪಠ್ಯಕ್ರಮದಲ್ಲಿ ಸಿ.ಬಿ.ಸಿ.ಎಸ್  : ಪ್ರೋ.ರಾಮಚಂದ್ರಗೌಡ

ದೇಶದ ಉತ್ತಮ ವಿಶ್ವವಿದ್ಯಾಲಯಗಳಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಒಂದಾಗಿ ಮಾಡುತ್ತೇನೆ  : ಪ್ರೋ.ರಾಮಚಂದ್ರಗೌಡ

 

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ರಾಷ್ಟ್ರೀಯ ಶಿಕ್ಷಣ ನೀತಿ-2019 ರ ಅನುಗುಣವಾಗಿ ಯು.ಜಿ ಪಠ್ಯಕ್ರಮದಲ್ಲಿ ಸಿ.ಬಿ.ಸಿ.ಎಸ್ (choice Based Credit System) ಪದ್ದತಿಯನ್ನು 2020-21 ನೇ ಸಾಲಿನಿಂದ ಆರಂಭಿಸಲಾಗುವುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ರಾಮಚಂದ್ರಗೌಡ ಅವರು ಹೇಳಿದರು.

ಶುಕ್ರವಾರ (ಅ.2) ನಗರದ ವಾರ್ತಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಶ್ವವಿದ್ಯಾಲಯದಕ್ಕೆ ಸಂಬಂಧಿಸಿದ ಎಲ್ಲ ಮೂಲಭೂತ ಸೌಕರ್ಯಗಳು ದೊರಕಿದ್ದೆ ಆದರೆ ದೇಶದ ಉತ್ತಮ ವಿಶ್ವವಿದ್ಯಾಲಯಗಳಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಒಂದಾಗಿ ಮಾಡುತ್ತೇನೆ ಎಂದರು.

ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಈಗಾಗಲೇ ಸಿ.ಬಿ.ಸಿ.ಎಸ್ ಪಠ್ಯಕ್ರಮದ ಬಗ್ಗೆ ಮಾಹಿತಿ ಮಾಹಿತಿ ನೀಡಿರುವುದಾಗಿ ಹೇಳಿದರು.
ಸಿ.ಬಿ.ಸಿ.ಎಸ್ ಪಠ್ಯಕ್ರಮದಿಂದ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣವನ್ನು ಈ ಭಾಗದ ಜನತೆಗೆ ಒದಗಿದಂತಾಗುದು. ಅದಕ್ಕಾಗಿ ವಿಶ್ವವಿದ್ಯಾಲಯವು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದರು.

ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುವಂತೆ ಶಿಕ್ಷಣವನ್ನು ನೀಡುವುದಾಗಿ ಹೇಳಿದರು.

ಪ್ರಸ್ತುತ ರಾ.ಚ.ವಿ ಯಲ್ಲಿ 19 ಸ್ನಾತಕೋತ್ತರ ಕೊರ್ಸಗಳು ಇದ್ದು ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಕೊರ್ಸಗಳಿಗಾಗಿ ಬೇರೆ ಬೇರೆ ವಿ.ವಿ ಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ ಮುಂಬರುವ 2020 -21 ಸಾಲಿನಿಂದ ಹೆಚ್ಚಿನ ಕೊರ್ಸಗಳನ್ನು ಆರಂಭಿಸಲು ಉದ್ದೇಶಿಸಿರುವದನ್ನು ಹೇಳಿದರು.

ರಾ.ಚ.ವಿ ರಾಷ್ಟ್ರೀಯ ಹೆದ್ದಾರಿ-4 ಕ್ಕೆ ಹೊಂದಿಕೊಂಡಂತೆ ಇರುವ 168.76 ಎಕರೆ ಪ್ರದೇಶವು ವಿಶ್ವವಿದ್ಯಾಲಯಕ್ಕೆ ಈವರೆಗೂ ಹಸ್ತಾಂತರವಾಗದೇ ಇರುವುದು ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತೊಡಕನ್ನುಂಟುಮಾಡಿದೆ ಎಂದರು.

ರಾ.ಚ.ವಿಯು ವಿಜಯಪುರ, ಬಾಗಲಕೋಟೆ ಮತ್ತು ಜಮಖಂಡಿಗಳಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ತೆರೆದಿದ್ದು ಅವಶ್ಯಕತೆಗಳಿಗನುಗುವಾಗಿ ಹೆಚ್ಚಿನ ಅಧ್ಯಯನ ವಿಭಾಗಗಳನ್ನು ಹಾಗೂ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ವಿಜಯಪುರದಲ್ಲಿ 31 ಎಕರೆ, ಜಮಖಂಡಿಯಲ್ಲಿ 72 ಎಕರೆ ಹಾಗೂ ಬಾಗಲಕೋಟೆಯಲ್ಲಿ ಜಮೀನು ಪಡೆದುಕೊಳ್ಳುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಹೇಳಿದರು.

ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಎರಡನೇ ಹಂತದ ಕಟ್ಟಡವು 4.80 ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಮಗಾರಿಯು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು ಮೂರನೇ ಹಂತದ ಕಾಮಗಾರಿಗೆ ರೂ 10 ಕೋಟಿ ಅನುಮೋದನೆ ದೊರೆತದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕುಲಸಚಿವರಾದ ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವ ಪ್ರೋ. ರಂಗರಾಜ ವನದುರ್ಗ,  ಹಣಕಾಸು ಅಧಿಕಾರಿಗಳಾದ ಶಂಕರಾನಂದ ಬನಶಂಕರಿ, ಡಾ. ಚಂದ್ರಶೇಖರ ವಾಗ್ಮರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button