ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಕರಣ ಮುಚ್ಚಿಹಾಕಲು ಏನೇನೋ ಪ್ರಯತ್ನ ಮಾಡಿ, ಯಾರ ಯಾರ ಮೇಲೋ ಒತ್ತಡ ಹೇರಿ ಹೇಳಿಕೆಗಳನ್ನು ಕೊಡಿಸುತ್ತಿದ್ದಾರೆ. ತನಿಖೆ ನಡೆದು ಸತ್ಯ ಹೊರಬರಲಿ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಯುವತಿ ಪೋಷಕರು ಆರೋಪ ಮಾಡಿದ ಮಾತ್ರಕ್ಕೆ, ನನ್ನ ವಿರುದ್ಧ ದೂರು ದಾಖಲಿಸಿದ ಮಾತ್ರ ನಾನು ಆರೋಪಿಯಾಗಲ್ಲ. ತನಿಖೆ ನಡೆಸಲು ಅಧಿಕಾರಿಗಳಿದ್ದಾರೆ, ಪೊಲೀಸರು ಇದ್ದಾರೆ. ತನಿಖೆ ನಡೆಯಲಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ಘನತೆಗೆ ತಕ್ಕಂತೆ, ಗೌರವಯುತವಾಗಿ ಕೆಲಸ ಮಾಡಲಿ ಎಂದರು.
ಇನ್ನು ಉಪಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ, ಮಸ್ಕಿ, ಬಸವಕಲ್ಯಾಣಕ್ಕೆ ನಾನು ರಾಮಲಿಂಗಾ ರೆಡ್ಡಿ, ಎಸ್ ಆರ್ ಪಾಟೀಲ್ ತೆರಳುತ್ತಿದ್ದೇವೆ. ಬೆಳಗಾವಿಗೆ ಭೇಟಿ ನೀಡುವ ವಿಚಾರಕ್ಕೆ ಯಾವ ಗೊಂದಲವಿಲ್ಲ. ಪ್ರತಿಭಟನೆಗಳು ನಡೆದರೆ ನಡೆಯಲಿ. ನನಗೆ ಯಾವುದೇ ಹೆಚ್ಚಿನ ಭದ್ರತೆಯೂ ಬೇಡ, ಭದ್ರತೆ ನಿಯೋಜಿಸುವ ಅಗತ್ಯವೂ ಇಲ್ಲ. ಪ್ರತಿಭಟನೆಗಳನ್ನು ಮಾಡಿದರೆ ಒಳ್ಳೆಯದೇ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಗೋಕಾಕಲ್ಲಿ ಪ್ರತಿಭಟನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ