ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಯನ್ನು ಇಂದು ಮಧ್ಯಾಹ್ನ ನ್ಯಯಾಧೀಶರ ಮುಂದೆ ಹಾಜರು ಪಡಿಸುತ್ತೇವೆ. ಜಡ್ಜ್ ಮುಂದೆಯೇ ಆಕೆ ಹೇಳಿಕೆಗಳನ್ನು ನೀಡಲಿದ್ದಾರೆ ಆದರೆ ಆಕೆಗೆ ಸಮರ್ಪಕವಾದ ರಕ್ಷಣೆ ನೀಡಬೇಕು ಎಂದು ಯುವತಿ ಪರ ವಕೀಲ ಜಗದೀಶ್ ಮನವಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಳಗಾವಿಯಲ್ಲಿ ಆರೋಪಿ ಬೆಂಬಲಿಗರು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಮೇಲೆ ಕಲ್ಲುತೂರಾಟ, ಚಪ್ಪಲಿಎಸೆತ ನಡೆಸಿದ್ದಾರೆ. ಓರ್ವ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಿಗೇ ಹೀಗೆ ಮಾಡಿರುವಾಗ ಇನ್ನು ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಬಂದು ಹೇಳಿಕೆ ನೀಡಲು ಸೂಕ್ತ ವಾತಾವಾರಣವಿಲ್ಲ. ಹಾಗಾಗಿ ಯುವತಿಯ ರಕ್ಷಣೆ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿನ್ನೆ ನಡೆದ ಘಟನೆ ಸೇರಿದಂತೆ ಯುವತಿ ರಕ್ಷಣೆ ಕುರಿತಾಗಿ ಸುಪ್ರೀಂ ಕೋರ್ಟ್ ಗೂ ಒಂದು ಅರ್ಜಿ ಸಲ್ಲಿಸುತ್ತೇವೆ. ಬೆಳಗಾವಿ ಘಟನೆಯನ್ನೂ ಸಾಕ್ಷಿಯಾಗಿ ತೆಗೆದುಕೊಳ್ಳುತ್ತೇವೆ ಎಂದರು.
ಯುವತಿ ಧೈರ್ಯವಾಗಿ ಈ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟು ನ್ಯಾಯಾಲಯದ ಮುಂದೆ ಬಂದು ಹೇಳಿಕೆಗಳನ್ನು ದಾಖಲಿಸಲು ಮುಕ್ತ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಆರೋಪಿಯನ್ನು ಮೊದಲು ಬಂಧಿಸಬೇಕು. ಆರೋಪಿ ಬಂಧನವಾಗದೇ ಒಳ್ಳೆಯ ವಾತಾವರಣವಿಲ್ಲ ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ