NationalPolitics

*ಶೀಘ್ರದಲ್ಲೇ ದೇಶದಲ್ಲಿ ಜನಗಣತಿ: ಅಮಿತ್ ಶಾ*

ಪ್ರಗತವಾಹಿನಿ ಸುದ್ದಿ: ಶೀಘ್ರದಲ್ಲೇ ದೇಶದಲ್ಲಿ ಜನಗಣತಿಯನ್ನು ಆರಂಭಿಸುತ್ತೇವೆ. ನಾವು ಜನಗಣತಿಯನ್ನು ಘೋಷಿಸಿದಾಗ, ಅದರ ಎಲ್ಲಾ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಮೋದಿ 3.0 ರ 100 ದಿನಗಳ ಯಶಸ್ಸಿನ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಮೊದಲು ಜನಗಣತಿಯು 2020ರಂದು ಏಪ್ರಿಲ್ 1 ಪ್ರಾರಂಭವಾಗಬೇಕಿತ್ತು. ಆದರೆ ಕೊರೊನಾದಿಂದಾಗಿ ಅದನ್ನು ಮುಂದೂಡಬೇಕಾಯಿತು. 60 ವರ್ಷಗಳ ನಂತರ ಮೊದಲ ಬಾರಿಗೆ, ದೇಶದಲ್ಲಿ ರಾಜಕೀಯ ಸ್ಥಿರತೆಯ ವಾತಾವರಣವಿದೆ. ದೇಶದಲ್ಲಿ ನೀತಿಗಳ ದಿಕ್ಕು ನೀತಿಗಳ ವೇಗ ಮತ್ತು ನಿಖರತೆಯನ್ನು ಕಾಪಾಡಿಕೊಳ್ಳುವ ಮೂಲಕ 11 ನೇ ವರ್ಷಕ್ಕೆ ಪ್ರವೇಶಿಸುವುದು ತುಂಬಾ ಕಷ್ಟ ಎಂದು ಹೇಳಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button