
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ತಿಲಕವಾಡಿ ಮೂಲದ ಸೆಂಟ್ರಾಕೇರ್ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಪ್ರತಿಷ್ಠಿತ ಎಂಟ್ರಿ ಲೆವೆಲ್ NABH (National Accreditation Board for Hospitals & Healthcare Providers) ಮಾನ್ಯತೆ ಲಭಿಸಿದೆ.
ಆಸ್ಪತ್ರೆಯ ಮೂಲಸೌಕರ್ಯ, ಸುರಕ್ಷತಾ ಮಾನದಂಡಗಳು, ತರಬೇತಿ ಪಡೆದ ಮಾನವ ಸಂಪನ್ಮೂಲ ಮತ್ತು ಗುಣಮಟ್ಟದ ಚಿಕಿತ್ಸಾ ಸೇವೆಗಳ ಆಧಾರದ ಮೇಲೆ ಈ ಮಾನ್ಯತೆ ನೀಡಲಾಗಿದೆ.
ಆಸ್ಪತ್ರೆಯು ಮೂತ್ರ ಪಿಂಡ (ಕಿಡ್ನಿ) ಕಸಿಗೂ ಸಹ ಮಾನ್ಯತೆ ಪಡೆದಿದೆ. ಆಸ್ಪತ್ರೆಯು ಆರೋಗ್ಯ ಕರ್ನಾಟಕ-ಆಯುಷ್ಯಮಾನ ಭಾರತ ಮತ್ತು ಕರ್ನಾಟಕ ಆರೋಗ್ಯ ಸಂಜೀವಿನಿ ಅಡಿ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ.
ವೈದ್ಯಕೀಯ ನಿರ್ದೇಶಕಿ ಡಾ. ನೀತಾ ದೇಶಪಾಂಡೆ ಅವರು, ಎಲ್ಲಾ ರೋಗಿಗಳಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆರೈಕೆ ಒದಗಿಸುವಲ್ಲಿ ತೊಡಗಿರುವ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




