ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಶಿಕ್ಷಣದ ಅಡಿಪಾಯ ಹಂತವಾದ ಬಾಲ್ಯದ ಆರೈಕೆ ಮತ್ತು ಶಿಕ್ಷಣ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆಯವರ ಪ್ರಶ್ನೆಗೆ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವೆ ಅನ್ನಪೂರ್ಣದೇವಿ ಅವರು ಉತ್ತರ ನೀಡಿದ್ದಾರೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಶಿಕ್ಷಣದ ಫೌಂಡೇಶನಲ್ ಸ್ಟೇಜ್ ಎಂದು ಕರೆಯಲ್ಪಡುವ ರಾಷ್ಟ್ರೀಯ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವು (NCFECCE) ಬರುತ್ತದೆ. ಇದು ದೇಶದಲ್ಲಿ 3-8 ವರ್ಷದೊಳಗಿನ ಮಕ್ಕಳಿಗೆ ಮೊದಲ ಸಮಗ್ರ ಪಠ್ಯಕ್ರಮ ಚೌಕಟ್ಟಾಗಿದೆ. ಇದು ಶಾಲಾ ಶಿಕ್ಷಣಕ್ಕಾಗಿ ಶಿಫಾರಸು ಮಾಡಿರುವ 5+3+3+4 ಪಠ್ಯಕ್ರಮದ ಭಾಗವಾಗಿದೆ.
ಈ ಪಠ್ಯಕ್ರಮವನ್ನು ದೇಶಾದ್ಯಂತ ವಿವಿಧ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಿ ಅಭಿವೃದ್ಧಿಪಡಿಸಲಾಗಿದೆ. ಫೌಂಡೇಶನಲ್ ಹಂತಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಬಾಲವಾಟಿಕಗಳನ್ನು ಹೊಂದಿರುವ 49 ಕೇಂದ್ರೀಯ ವಿದ್ಯಾಲಯಗಳ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಮೀಸಲಾತಿಯ ಮಾನದಂಡಗಳ ಆದ್ಯತೆಯ ಪ್ರಕಾರ ಬಾಲವಾಟಿಕಾ ಕಲಿಕಾ ತರಗತಿಗಳಲ್ಲಿ ಮಕ್ಕಳಿಗೆ ಪ್ರವೇಶವನ್ನು ನೀಡಲಾಗಿದೆ. NCERT ಸಿದ್ಧಪಡಿಸಿದ ಪಠ್ಯಕ್ರಮ ಮತ್ತು ಸಂಪನ್ಮೂಲ ಸಾಮಗ್ರಿಗಳನ್ನು ಈ ತರಗತಿಗಳಲ್ಲಿ ಬಳಸಲಾಗುತ್ತಿದೆ.
ಇಂತಹ ತರಗತಿಗಳಲ್ಲಿ ಆಟದ ಆಧಾರಿತ ಚಟುವಟಿಕೆಗಳನ್ನು ಪ್ರಧಾನವಾಗಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಜಂಟಿ ಸಮಿತಿ ಸದಸ್ಯರಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಆಯ್ಕೆ
https://pragati.taskdun.com/mp-annasaheb-jolle-was-selected-as-a-member-of-the-joint-committee-of-the-centre/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ