EducationElection NewsKannada NewsKarnataka NewsNationalPolitics

*ಅಂಬೇಡ್ಕರ್ ಜನ್ಮ ದಿನಾಚರಣೆಗೆ ಸಾರ್ವಜನಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಾದ ಏಪ್ರಿಲ್ 14 ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ.

ಈ ಬಗ್ಗೆ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು “ಸಂವಿಧಾನದ ಶಿಲ್ಪಿ ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದವರು, ನಮ್ಮ ಗೌರವಾನ್ವಿತ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯಂದು ಸಾರ್ವಜನಿಕ ರಜೆ ಇರುತ್ತದೆ” ಎಂದು ಬರೆದುಕೊಂಡಿದ್ದಾರೆ.

“ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಬಾಬಾ ಸಾಹೇಬ್ ಅವರ ನಿಷ್ಠಾವಂತ ಅನುಯಾಯಿ, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಭಾವನೆಗಳನ್ನು ಗೌರವಿಸಿದ್ದಾರೆ” ಎಂದು ಶೇಖಾವತ್ ಹೇಳಿದ್ದಾರೆ.

Home add -Advt

Related Articles

Back to top button