Kannada NewsKarnataka NewsNationalPolitics

*ಐಷಾರಾಮಿ ಜೀವನಕ್ಕಾಗಿ ಕಳ್ಳತನದ ಹಾದಿ ಹಿಡಿದಿದ್ದ ಕೇಂದ್ರ ಸರ್ಕಾರದ ನೌಕರರು*

ಪ್ರಗತಿವಾಹಿನಿ ಸುದ್ದಿ: ರೈಲ್ವೆಯಲ್ಲಿ ನೌಕರಿ ಇದ್ದರೂ ಐಷಾರಾಮಿ ಜೀವನ ನಡೆಸಲು ಕಳ್ಳತನದ ದಾರಿ ಹಿಡಿದಿದ್ದ ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಆರೋಪಿಯನ್ನು ಹುಬ್ಬಳ್ಳಿ ಮೂಲದ ನಿವಾಸಿಗಳಾದ ರೇಷ್ಮಾ, ರವಿ, ಆಸ್ಮಾ ಭಾನು, ಮುಬಾರಕ್, ದಸ್ತಗಿರ್ ಬಂಧಿತರು. ಇನ್ನು ಪ್ರಮುಖವಾಗಿ ಮಹಿಳೆಯರೇ ಕಳ್ಳತನದಲ್ಲಿ ಮಾಸ್ಟರ್ ಮೈಂಡ್ ಆಗಿದ್ದಾರೆ. ಇವರು ನಕಲಿ ಚಾವಿ ಬಳಸಿ ಹುಬ್ಬಳ್ಳಿ-ಧಾರವಾಡದ ಹಲವೆಡೆ ಬೈಕ್ ಎಗರಿಸುತ್ತಿದ್ದರು.​ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಕೂಡ ಸೆರೆಯಾಗಿತ್ತು. ಹೆಂಗಸರ ಈ ಕಳ್ಳತನದ ಕೃತ್ಯಕ್ಕೆ ಪೊಲೀಸರೇ ದಂಗಾಗಿದ್ದು, ಸಧ್ಯ ಈ ಖತರ್ನಾಕ್ ಕಳ್ಳರು ಅವಳಿನಗರ ಪೋಲೀಸರ ಬಲೆಗೆ ಬಿದ್ದಿದ್ದಾರೆ.

ಅಚ್ಚರಿ ಅಂದರೆ ಆಸ್ಮಾ ಭಾನು ಮತ್ತು ಮುಬಾರಕ್ ಎಂಬುವವರು ರೈಲ್ವೆ ನೌಕರರಾಗಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೆಣ್ಣುಮಕ್ಕಳು ಇಂತಹ ಕೆಲಸದಲ್ಲಿ ಭಾಗಿಯಾಗಿರೋದು ನಾವು ನೋಡಿರಲಿಲ್ಲ. ಇನ್ನು ಹೆಚ್ಚಿನ ತನಿಖೆ ಮಾಡಬೇಕಿದೆ ಎಂದರು.

Home add -Advt

Related Articles

Back to top button