Kannada NewsKarnataka NewsNationalPolitics

ಗೋಧಿ ಬೆಲೆ ಸ್ಥಿರತೆಗೆ ಕೇಂದ್ರ ಸರ್ಕಾರ ನಿಗಾ: ಪ್ರಲ್ಹಾದ ಜೋಶಿ

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಗೋಧಿ ಬೆಲೆ ಸ್ಥಿರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿಗಾ ವಹಿಸಲು ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ನೂತನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಮಿತಿ ಸಭೆಯಲ್ಲಿ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಆಹಾರೋತ್ಪನ್ನಗಳ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಇರುವ ಮಾರ್ಗಗಳ ಕುರಿತು ಮಾಹಿತಿ ಕಲೆ ಹಾಕಲಾಯಿತು ಎಂದು ಹೇಳಿದ್ದಾರೆ.

ಅಗತ್ಯ ವಸ್ತುಗಳ ಬೆಲೆಗಳನ್ನು ಪರಿಶೀಲಿಸಲೆಂದೇ ನಡೆದ ಈ ಸಭೆಯಲ್ಲಿ ವಿಶೇಷವಾಗಿ ಗೋಧಿ ದಾಸ್ತಾನು ಮತ್ತು ಬೆಲೆ ಬಗ್ಗೆ ಪ್ರಸ್ತಾಪಿಸಿ, ಚರ್ಚಿಸಲಾಯಿತು.

2024ರ ಜೂನ್ 18ರವರೆಗೆ 266 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹಿಸಲಾಗಿದೆ. 2023ರಲ್ಲಿ ಇದೇ ವೇಳೆಗೆ 262 LMT ಗೋಧಿ ಸಂಗ್ರಹ ಇತ್ತೆಂದು ಸಚಿವ ಜೋಶಿ ತಿಳಿಸಿದ್ದಾರೆ.

ಗೋಧಿ ದಾಸ್ತಾನು ಮತ್ತು ಬೆಲೆಗಳ ಬಗ್ಗೆ ಸಮಗ್ರ ಚರ್ಚೆ ನಡೆದಿದ್ದು, 2023ಕ್ಕೆ ಹೋಲಿಸಿದರೆ ಈ ಬಾರಿ 4 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ಗೋಧಿ ದಾಸ್ತಾನಿದೆ. PDS ಮತ್ತು ಇತರ ಕಲ್ಯಾಣ ಯೋಜನೆಗಳ ಅಗತ್ಯವನ್ನು ಪೂರೈಸಿದ ನಂತರ ಸುಮಾರು 184 LMTನಷ್ಟು ಗೋಧಿ ದಾಸ್ತಾನು ಲಭ್ಯವಿರಲಿದೆ ಎಂದು ಹೇಳಿದ್ದಾರೆ.

ಗೋಧಿ ಬೆಲೆಗಳ ಮೇಲೆ ನಿಕಟವಾಗಿ ನಿಗಾ ಇಡಲು ಮತ್ತು ದೇಶದ ಗ್ರಾಹಕರಿಗೆ ಬೆಲೆ ಸ್ಥಿರತೆಗಾಗಿ ಸೂಕ್ತ ನೀತಿ ರೂಪಿಸಿ ಕ್ರಮ ಕೈಗೊಳ್ಳಬಹುದು ಎಂದು ಸಭೆಯಲ್ಲಿ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದ್ದಾರೆ.

ರಾಜ್ಯ ಸಚಿವರು ಮತ್ತು ಉನ್ನತ ಅಧಿಕಾರಿಗಳ ಸಭೆ

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವರು ಮತ್ತು  ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಪ್ರಲ್ಹಾದ ಜೋಶಿ ಅವರೂ ಪ್ರತ್ಯೇಕ ಸಭೆ ನಡೆಸಿದರು.

ಅಧ್ಯಕ್ಷತೆ ವಹಿಸಿದ್ದ ಸಚಿವರು, ಸಚಿವಾಲಯದ ವಿವಿಧ ಕಾರ್ಯಗಳ ಬಗ್ಗೆ ಕುರಿತು ಚರ್ಚೆ ನಡೆಸಿದರು. ಸಚಿವಾಲಯ ಮತ್ತು ಅದರ ಕಚೇರಿಗಳ ಕಾರ್ಯನಿರ್ವಹಣೆ ಪರಿಶೀಲಿಸಿ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ನಿರ್ದೇಶನ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button