ಬ್ರಿಟೀಷರಿಂದ ನಿಷೇಧಿಸಲ್ಪಟ್ಟ ಸಾಹಿತ್ಯ ಪುನರುಜ್ಜೀವನಕ್ಕೆ ಚಾಲನೆ; ಪ್ರಾದೇಶಿಕ ಭಾಷೆಗಳಲ್ಲಿ ಕೇಂದ್ರ ಸಚಿವರಿಂದಲೇ ಕವನ ವಾಚನ
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟೀಷರಿಂದ ನಿಷೇಧಿಸಲ್ಪಟ್ಟಿದ್ದ ಸಾಹಿತ್ಯಗಳನ್ನು ಕೇಂದ್ರ ಸರ್ಕಾರ ಮತ್ತೆ ಪುನರುಜ್ಜೀವನಗೊಳಿಸಲು ಮುಂದಾಗಿದೆ.
ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಅಮೃತ್ ಮಹೋತ್ಸವ ವೆಬ್ ಸೈಟ್ ನಲ್ಲಿ 1947ರ ಮೊದಲು ಬರೆದ ಬೆಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮರಾಠಿ, ಒಡಿಯಾ, ಪಂಜಾಬಿ, ಹಿಂದಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಗಳ ಕೆಲವು ಕವನಗಳನ್ನು ಸ್ವತಂತ್ರ ಸ್ವರ್ ಎಂಬ ಭಾಗವಾಗಿ ಪ್ರಕಟಗೊಳ್ಳಲಿದೆ.
ಈ ಬಗ್ಗೆ ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ್ ರೆಡ್ದಿ, ಮೀನಾಕ್ಷಿ ಲೇಖಿ, ಸಚಿವರಾದ ಅನುರಾಗ್ ಠಾಕೂರ್, ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ ಸೇರಿದಂತೆ ಹಲವು ಸಚಿವರು ವಿವಿಧ ಭಾಷೆಗಳಲ್ಲಿ ವಿಡಿಯೋ ಹಂಚಲಿದ್ದಾರೆ.
ಕೇಂದ್ರ ಸಚಿವ ಠಾಕೂರ್, ಆಜಾದಿ ಕಿ ಬಾನ್ಸುರಿ ಪುಸ್ತಕದಿಂದ ರಾಷ್ಟ್ರೀಯ ಪಟಕಾ ಎಂಬ ಹಿಂದಿ ಕವನವನ್ನು ವಾಚಿಸಿದರೆ, ರೆಡ್ದಿ ಅವರು ವಡ್ಡಾಧಿ ಸೀತಾರಾಮಂಜನೇಯುಲು ಮತ್ತು ಪಿಡಿಪೆದ್ದಿ ಕಾಶಿ ವಿಶ್ವನಾಥ ಶಾಸ್ತ್ರಿ ಅವರ ಭಾರತ ಮಠ ಗೀತಂ ಎಂಬ ತೆಲುಗು ಕವಿತೆ ವಾಚಿಸಲಿದ್ದಾರೆ.
ಧರ್ಮೇಂದ್ರ ಪ್ರಧಾನ್, ಅವರು ಒಡಿಯಾದ ಕವಿ ಗಂಗಾಧರ ಮಿಶ್ರಾ ಅವರ ದರಿದ್ರ ನಿಯಾನ್ ಕವಿತೆ ಓದಲಿದ್ದಾರೆ. ಮಾಂಡವಿಯ ಅವರು ಚಾವರ್ಚಂದ್ ಮೇಘಾನಿ ಅವರ ಸಿಂಧುಡೋ ಪುಸ್ತಕದಿಂದ ಗುಜರಾತಿ ಕವಿತೆ ಕಸುಂಬಿ ನೋ ರಂಗ್ ಕವಿತೆ ವಾಚಿಸಲಿದ್ದಾರೆ.
ಈ ಕವಿತೆಗಳೆಲ್ಲವೂ ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಚನೆಗೊಂಡ ಕ್ರಾಂತಿಕಾರಿ ಕವಿತೆಗಳಾಗಿದ್ದು, ಬ್ರಿಟೀಷ್ ಆಳ್ವಿಕೆ ಸಂದರ್ಭದಲ್ಲಿ ನಿಷೇಧಿತಗೊಂಡಿದ್ದವು. ಇದೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ 9 ಪ್ರಾದೇಶಿಕ ಭಾಷೆಗಳಲ್ಲಿರುವ ಈ ಕವಿತೆಗಳು ಅಮೃತ್ ಮಹೋತ್ಸವ್ ವೆಬ್ ಸೈಟ್ ಮೂಲಕ ಸಚಿವರುಗಳಿಂದಲೇ ವಾಚನಗೊಳ್ಳುತ್ತಿರುವುದು ವಿಶೇಷ.
ಕಾರ್ತಿ ಚಿದಂಬರಂ ನಿವಾಸದ ಮೇಲೆ CBI ಅಧಿಕಾರಿಗಳ ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ