
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರ ಉಚಿತ ಪಡಿತರ ಯೋಜನೆಯಿಂದ 2.25 ಕೋಟಿ ಹೆಸರುಗಳನ್ನು ತೆಗೆದು ಹಾಕಿದೆ. ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಡೇಟಾ ಬೇಸ್ ನಿಂದ 2.25 ಕೋಟಿ ಅನರ್ಹ ಫಲಾನುಭವಿಗಳನ್ನು ತೆಗೆದುಹಾಕಿದೆ.
ಕಾರು, ಹೆಚ್ಚಿನ ಆದಾಯ ಹೊಂದಿರುವವರು, ಕಂಪನಿ ನಿರ್ದೇಶಕರು ಹಾಗೂ ಮೃತ ವ್ಯಕ್ತಿಗಳ ಹೆಸರುಗಳನ್ನು ಫಲಾನುಭವಿಗಳ ಲಿಸ್ಟ್ ನಿಂದ ತೆಗೆಯಲಾಗಿದೆ. ರಾಜ್ಯಗಳು ಇವುಗಳನ್ನು ಪರಿಶೀಲಿಸಿ ಅರ್ಹ ಮನೆಗಳನ್ನು ಸೇರಿಸುತ್ತಿವೆ ಎಂದು ತಿಳಿದುಬಂದಿದೆ.




