*ಕೇಂದ್ರದಿಂದ ಬೆಳಗಾವಿಗೆ 70.85 ಕೋಟಿ ರೂ ಅನುದಾನ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ: ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಯಲದಿಂದ ಕೋಲ್ಡ್ ಚೈನ್ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 70.85 ಕೋಟಿ ರೂ ವೆಚ್ಚದ 4 ಯೋಜನೆಗಳನ್ನು ಅನುಮೋದಿಸಿದೆ ಮತ್ತು 28.10 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವ ರವನೀತ್ ಸಿಂಗ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ಜಿಲ್ಲೆಯ ‘ಕೋಲ್ಡ್ ಚೈನ್’ ಯೋಜನೆಯಡಿ ಮೂಲಸೌಕರ್ಯಗಳ ಅಭಿವೃದಿಗಾಗಿ ಕೇಂದ್ರ ಸರ್ಕಾರವು ಹೂಡಿಕೆ ಮಾಡಿ ಬಂಡವಾಳದ ಕುರಿತು ಕೇಳಿದ ಪ್ರಶ್ನಗೆ ಉತ್ತರಿಸಿದ ಸಚಿವರು ಶೀತಲೀಕರಣ ಸೌಲಭ್ಯಗಳ ಕೊರತೆಯಿಂದಾಗಿ ಸುಮಾರು 25-30% ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳು ವ್ಯರ್ಥವಾಗುತ್ತಿವೆ, ಇದರಿಂದಾಗಿ ರೈತರಿಗೆ ತುಂಬಾ ನಷ್ಟವಾಗುತ್ತದೆ. ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಹಣ್ಣುಗಳಂತಹ ಬೇಗನೆ ಹಾಳಾಗುವ ವಸ್ತುಗಳನ್ನು ದೀರ್ಘಕಾಲದವರೆಗೆ ಸಂರಕ್ಷಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸುತ್ತದೆ. ಇದು ರೈತರ ಲಾಭವನ್ನು ಹೆಚ್ಚಿಸುವುದರ ಜೊತೆಗೆ ಗುಣಮಟ್ಟ ಮತ್ತು ಪೌಷ್ಠಿಕಾಂಶದ ಮೌಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕರ್ನಾಟಕ ರಾಜ್ಯದಲ್ಲಿ 2 ಮೆಗಾ ಫುಡ್ ಪಾರ್ಕ್ಗಳನ್ನು ಸಚಿವಾಲಯ ಅನುಮೋದಿಸಿದೆ.
ಒಟ್ಟು 144 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ ತುಮಕೂರು ಇಂಟಿಗ್ರೇಟೆಡ್ ಮೆಗಾ ಫುಡ್ ಪಾರ್ಕ್ಗೆ 48.72 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ ಮತ್ತು ಒಟ್ಟು 87.10 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ ಮಂಡ್ಯ ಫೇವೊರಿಚ್ ಇನ್ಫಾç ಪ್ರೆöÊವೇಟ್ ಲಿಮಿಟೆಡ್ ಪಾರ್ಕ್ಗೆ 37.57 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಒಟ್ಟು 70.85 ಕೋಟಿ ರೂ ವೆಚ್ಚದ 4 ಯೋಜನೆಗಳನ್ನು ಅನುಮೋದಿಸಿದೆ ಮತ್ತು 28.10 ಕೋಟಿ




