Karnataka NewsLatest

ಮೇ11, 13 ರಂದು ಸಿಇಟಿ ಆನ್ಲೈನ್ ಅಣಕು ಪರೀಕ್ಷೆ; ನೋಂದಣಿಗೆ ಕ್ಯೂಆರ್ ಕೋಡ್ ಇಲ್ಲಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಂಜಿನಿಯರಿಂಗ್ ಸೀಟಿಗಾಗಿ ಕರ್ನಾಟಕ ಸಿಇಟಿ ಪರೀಕ್ಷೆಗೆ ಈಗಾಗಲೇ ಪಿಯುಸಿ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈ ಕೊನೆಯ ಹಂತದ ತಯಾರಿಗಾಗಿ, ಅಣಿಗೊಳ್ಳಲು ಪೂರಕವಾಗಿ ಬೆಳಗಾವಿಯ ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , GIT ಆನ್ಲೈನ್ ಅಣಕು ಪರೀಕ್ಷೆ ನಡೆಸುತ್ತಿದೆ.

ಈ ಪರೀಕ್ಷೆಗೆ ಹಾಜರಾಗುವ ಮೂಲಕ ಪರೀಕ್ಷಾರ್ಥಿಗಳು ತಮ್ಮಸಿದ್ಧತೆಯನ್ನುಪರಾಮರ್ಶಿಸಿ, ಪರೀಕ್ಷಾ ತಯಾರಿಯನ್ನು ಇನ್ನೂ ಉತ್ತಮಪಡಿಸಿಕೊಳ್ಳಲು ಈ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಮೇ 11 ರಂದು11ರಿಂದ 12.20 ಗಂಟೆವರೆಗೆ ಫಿಸಿಕ್ಸ್, 2 ರಿಂದ 3.20 ರವರೆಗೆ ಕೆಮಿಸ್ಟ್ರಿ ಹಾಗೂ ಮೇ 13ರಂದು 11ರಿಂದ 12.20 ಗಂಟೆವರೆಗೆ ಗಣಿತ ವಿಷಯದ ಅಣಕು ಪರೀಕ್ಷೆ ನಡೆಸಲಾಗುವುದು.

ಈಗಾಗಲೇ ಸುಮಾರು 600 ಪಿಯುಸಿ ವಿದ್ಯಾರ್ಥಿಗಳು ಈ ಪರೀಕ್ಷೆಗೆ ನೋಂದಾಯಿಸಿದ್ದಾರೆ.

ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ವತಿಯಿಂದ ನಗದು ಬಹುಮಾನ ನೀಡಲಾಗುವುದು. ಪರೀಕ್ಷೆಯಲ್ಲಿ ಭಾಗವಹಿಸಲು ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಪ್ರಾಚಾರ್ಯ ಪ್ರೊ.ಡಿ .ಎ. ಕುಲಕರ್ಣಿ ತಿಳಿಸಿದ್ದಾರೆ .

https://pragati.taskdun.com/accused-of-police-baton-to-a-woman-who-came-to-vote-locals-argue-and-push-with-polling-station-officials/

https://pragati.taskdun.com/d-k-shivakumarreactionvidhanasabha-election-6/
https://pragati.taskdun.com/belagavi9-placevoting-stop/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button