Kannada NewsKarnataka NewsNationalPolitics

*ತುಂಗಭದ್ರಾ ಜಲಾಶಯದ 19 ನೇ  ಗೇಟ್​​ನ ಚೈನ್ ಲಿಂಕ್ ಕಟ್: ಹೈ ಅಲರ್ಟ್ ಗೆ ಸೂಚನೆ* *ವಿಡೀಯೋ ನೋಡಿ*

ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19 ನಂಬರ್‌ ಗೇಟ್​​ನ ಚೈನ್ ಲಿಂಕ್ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ತುಂಡಾಗಿದೆ. ಇದರಿಂದಾಗಿ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯದಿಂದ ನದಿಗೆ ಹರಿದು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲೆಗಳಿಗೆ ಮಾತ್ರವಲ್ಲದೇ ನೆರೆಯ ಆಂಧ್ರ, ತೆಲಂಗಾಣ ‌ರಾಜ್ಯಗಳ ಪಾಲಿನ ಜೀವನಾಡಿಯಾದ ತುಂಗಭದ್ರೆ ಜಲಾಶಯಕ್ಕೆ ಈ‌ ಬಾರಿ‌ ಅಭದ್ರತೆ ಎದುರಾಗಿದೆ. ಜಲಾಶಯದ 19ನೇ ಕ್ರಸ್ಟ್ ಗೇಟ್ ನಲ್ಲಿ‌ ದಿಢೀರ್ ತಾಂತ್ರಿಕ ದೋಷ ಕಂಡು ಬಂದಿದ್ದಕ್ಕೆ‌ ಇಂತಹ ಪರಿಸ್ಥಿತಿ ಎದುರಾಗಿದೆ.‌ ಗೇಟ್ ಸಮಸ್ಯೆ ‌ಹಿನ್ನಲೆಯಲ್ಲಿ ತಡ ರಾತ್ರಿ ಬೆಂಗಳೂರಿಂದ ಮುನಿರಬಾದ್ ಗೆ ಆಗಮಿಸಿದ‌ ಸಚಿವ ತಂಗಡಗಿ ಪರಿಶೀಲನೆ ನಡೆಸಿದ್ದಾರೆ.‌

ರಾತ್ರಿ ಇಡೀ ಜಲಾಶಯದ ಬಳಿಯೇ ಉಳಿದುಕೊಂಡ ಅಧಿಕಾರಿಗಳು, 19 ಗೇಟ್ ದುರಸ್ಥಿಗಾಗಿ ಡ್ಯಾಂ ನಲ್ಲಿರುವ ಕನಿಷ್ಠ 60 ಟಿಎಂಸಿ ನೀರು ಖಾಲಿ ಅನಿವಾರ್ಯ ಎಂದಿದ್ದಾರೆ.‌ ತುಂಗಭದ್ರಾ ಜಲಾಶಯದ‌ 19ನೇ ಗೇಟ್ ರಿಪೇರಿಗೆ ಬೆಂಗಳೂರು, ಹೈದರಾಬಾದ್ ನಿಂದ ತಜ್ಞರನ್ನು ತುಂಗಭದ್ರಾ ಮಂಡಳಿ ಆಹ್ವಾನಿಸಿದೆ ಎನ್ನಲಾಗಿದೆ.‌

ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಜಿಲ್ಲಾಡಳಿತಗಳಿಗೆ ಹೈ ಅಲಟ್೯ ಗೆ ಸೂಚನೆ ನೀಡಲಾಗಿದ್ದು, ಇದರಿಂದಾಗಿ ಜಲಾಶಯದ ‌ಅಚ್ಚುಕಟ್ಟು ಪ್ರದೇಶದ 6 ಲಕ್ಷ ಹೆಕ್ಟೇರ್ ಗೂ ಅಧಿಕ‌ ಬೆಳೆ‌ಗೆ ಹಾನಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button