ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಾಜ್ಯ ಕ್ರೆಡೈ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬೆಳಗಾವಿಯ ಪ್ರಸಿದ್ಧ ರಿಯಲ್ ಎಸ್ಟೇಟ್ ಉದ್ಯಮಿ ಚೈತನ್ಯ ಕುಲಕರ್ಣಿ ಅವರನ್ನು ರಾಷ್ಟ್ರೀಯ ಹೌಸಿಂಗ್ ಕಮಿಟಿಯ ಚೇರಮನ್ (Chairman- Affordable Housing Committee) ಆಗಿ ನೇಮಕ ಮಾಡಲಾಗಿದೆ.
ಚೈತನ್ಯ ಕುಲಕರ್ಣಿ ಒಂದು ವರ್ಷದ ಕರ್ನಾಟಕ ಕ್ರೆಡೈ ಚೆರಮನ್ ಹುದ್ದೆಯನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದಾರೆ. ಇದೀಗ ಅವರನ್ನು ಕ್ರೆಡೈ ರಾಷ್ಟ್ರೀಯ ಸಮಿತಿಗೆ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಕೈಗೆಟುಕುವ ದರದ ವಸತಿ ಸಮಿತಿಗೆ ಅವರು ಚೆರಮನ್ ಆಗಿರುತ್ತಾರೆ. ಕ್ರೆಡೈ ರಾಷ್ಟ್ರೀಯ ಅಧ್ಯಕ್ಷ ಬೋಮನ್ ಇರಾನಿ ಚೈತನ್ಯ ಕುಲಕರ್ಣಿ ಹೆಸರನ್ನು ನಾಮನಿರ್ದೇಶನ ಮಾಡಿದ್ದಾರೆ. ಸಮಿತಿಯು ಅಧ್ಯಕ್ಷರು, ಸಹ ಅಧ್ಯಕ್ಷರು ಮತ್ತು ದೇಶದ ವಿವಿಧ ರಾಜ್ಯಗಳ 3 ಸದಸ್ಯರನ್ನು ಒಳಗೊಂಡಿದೆ.
ಕ್ರೆಡೈ ಬೆಳಗಾವಿಯ ಸದಸ್ಯರೊಬ್ಬರು ರಾಷ್ಟ್ರೀಯ ಮಟ್ಟದಲ್ಲಿ ನಾಮಕರಣಗೊಂಡಿರುವುದು ವಿಶೇಷವಾಗಿದೆ. ಕ್ರೆಡೈ ನ್ಯಾಶನಲ್ 13 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಮತ್ತು ರಾಷ್ಟ್ರದಾದ್ಯಂತ 226 ಶಾಖೆಗಳನ್ನು ಹೊಂದಿದೆ.
For English:
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ