Kannada NewsKarnataka NewsLatest

ಕರ್ನಾಟಕದ ಹೆಮ್ಮೆ: ಆಫ್ರಿಕಾದಲ್ಲಿ 6000 ಮನೆ ಕಟ್ಟಲಿರುವ ಬೆಳಗಾವಿಯ ಚೈತನ್ಯ ಕುಲಕರ್ಣಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ರಿಯಲ್ ಎಸ್ಟೇಟ್ ಉದ್ಯಮಿ, ಕ್ರೆಡೈ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಆಫ್ರಿಕಾದಲ್ಲಿ 6000 ಮನೆಗಳನ್ನು ಕಟ್ಟಲಿದ್ದಾರೆ.

ಅಲ್ಲಿನ ಸರಕಾರಿ ನೌಕರರು ಮತ್ತು ಸಾಮಾನ್ಯ ನಾಗರಿಕರಿಗಾಗಿ ಕೈಗೆಟಕುವ ಬೆಲೆಯಲ್ಲಿ ಈ ಮನೆಗಳು ನಿರ್ಮಾಣವಾಗಲಿವೆ. ಇದಕ್ಕಾಗಿ ಈಗಾಗಲೆ ಒಪ್ಪಂದಕ್ಕೆ ಸಹಿಯಾಗಿದೆ.

ಕರ್ನಾಟಕದ ಉದ್ಯಮಿಯೊಬ್ಬರು ಆಫ್ರಿಕಾದಲ್ಲಿ ಮಾಡುತ್ತಿರುವ ಮೊದಲ ಮತ್ತು ಏಕೈಕ ಹೂಡಿಕೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕ್ರಿಶಿಲ್ ರೇಟಿಂಗ್ ನಲ್ಲಿ ಚೈತನ್ಯ ಕುಲಕರ್ಣಿ ಅವರ ನಿತ್ಯ ಚೈತನ್ಯ ಕಂಪನಿ 2017ರಲ್ಲಿ 7 ಸ್ಟಾರ್  ರೇಟಿಂಗ್ ಪಡೆದಿತ್ತು. ಭಾರತದಲ್ಲೇ ಟಾಪ್ 100 ಕಂಪನಿಗಳಲ್ಲಿ ಸೇರ್ಪಡೆಯಾಗಿತ್ತು. ಇದನ್ನು ಗಮನಿಸಿದ ಆಫ್ರಿಕಾ ಸರಕಾರ ಚೈತನ್ಯ ಕುಲಕರ್ಣಿ ಅವರಿಗೆ ಹೂಡಿಕೆಗೆ ಆಹ್ವಾನ ನೀಡಿತ್ತು.

ಇದರಿಂದಾಗಿ ಆಫ್ರಿಕಾದೊಂದಿಗೆ ಭಾರತದ ಸಂಬಂಧ ಮತ್ತು ಗೌರವ ಹೆಚ್ಚಲಿದೆ. ಕಳೆದ 2 ವರ್ಷದಿಂದಲೇ ವ್ಯವಹಾರ ಮಾತುಕತೆ ನಡೆದಿದ್ದು, ಕೊರೋನಾ ಕಾರಣದಿಂದಾಗಿ ವಿಳಂಬವಾಗಿದೆ.

ಚೈತನ್ಯ ಕುಲಕರ್ಣಿ ಅವರ ಈ ವ್ಯವಹಾರ ಕರ್ನಾಟಕಕ್ಕೆ, ಅದರಲ್ಲೂ ಬೆಳಗಾವಿಗೆ ದೊಡ್ಡ ಹೆಮ್ಮೆಯಾಗಿದೆ.

 

ಇಂಡೋ – ಆಫ್ರಿಕನ್ ಬಿಸಿನೆಸ್ ರಿಲೇಶನ್: ಬೆಳಗಾವಿಯಲ್ಲಿ ಮಹತ್ವದ ಕಾನ್ಫರೆನ್ಸ್

ಕ್ರೆಡೈ ರಾಜ್ಯಾಧ್ಯಕ್ಷರಾಗಿ ಚೈತನ್ಯ ಕುಲಕರ್ಣಿ ಆಯ್ಕೆ

ForEnglish News

https://pragativahini.in/pride-of-karnataka-chaitanya-kulkarni-to-build-6000-houses-in-east-africa

Pride of Karnataka; Chaitanya Kulkarni to build 6000 houses in East Africa

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button