
ಪ್ರಗತಿವಾಹಿನಿ ಸುದ್ದಿ: 17 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿಷಿತ ದೇವಮಾನವ ಚೈತನ್ಯಾನಂದ ಸ್ವಾಮೀಜಿಯವರನ್ನು ಬಂಧಿಸಲಾಗಿದೆ.
ಇಂದು ಬೆಳಿಗ್ಗೆ ಆಗ್ರಾದಲ್ಲಿ ಚೈತನ್ಯಾನಂದ ಸ್ವಾಮೀಜಿ (62)ಯವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧನಕ್ಕೂ ಮುನ್ನ ಚೈತನ್ಯಾನಂದ ಸ್ವಾಮೀಜಿ ಅವರ್ ಬ್ಯಾಂಕ್ ಖಾತೆಯಿಂದ 8 ಕೋಟಿ ರೂಪಾಯಿ ತಡೆ ಹಿಡಿಯಲಾಗಿದೆ. ಸದ್ಯ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ನೈಋತ್ಯ ದೆಹಲಿಯ ಮ್ಯಾನೇಜ್ಮೆಂಟ್ ಇನ್ ಶ್ತಿಟ್ಯೂಟ್ ನ ಮಾಜಿ ಚೇರ್ಮನ್ ಚೈತನ್ಯಾನಂದ ಸ್ವಾಮೀಜಿ ಮಹಿಳಾ ವಿದ್ಯಾರ್ಥಿನಿಯರನ್ನು ತಡ ರಾತ್ರಿ ತಮ್ಮ ಕ್ವಾರ್ಟರ್ಸ್ ಗೆ ಭೇಇ ನೀಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೇ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದರು. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಬೆದರಿಕೆಯೊಡ್ಡುತ್ತಿದ್ದರು. ಈ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿಯರು ದೂರು ನೀಡಿದ್ದರು.