Latest

ಬಿಗ್ ಬಾಸ್ ಖ್ಯಾತಿಯ ಸ್ಪರ್ಧಿ ಆತ್ಮಹತ್ಯೆಗೆ ಯತ್ನ

ಪ್ರಗತಿವಾಹಿನಿ ಸುದ್ದಿ; ಕೋಲಾರ: ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ಚೈತ್ರಾ ಕೋಟೂರ್ ಮದುವೆ ವಿವಾದಗಳಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ಕುರುಬರಪೇಟೆ ತಮ್ಮ ನಿವಾಸದಲ್ಲಿ ಚೈತ್ರಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

ಚೈತ್ರಾ ಕೋಟೂರ್ ಹಾಗೂ ಮಂಡ್ಯ ಮೂಲದ ನಾಗಾರ್ಜುನ್ ಪರಸ್ಪರ ಪ್ರೀತಿಸುತ್ತಿದ್ದು, ಮಾರ್ಚ್ 28ರಂದು ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದರು. ಹುಡುಗನ ಮನೆಯವರು ಚೈತ್ರಾ ತಮ್ಮ ಮಗನನ್ನು ಬಲವಂತದಿಂದ ವಿವಾಹವಾಗಿದ್ದಾಗಿ ದೂರು ನೀಡಿದ್ದರು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ವಿವಾಹದ ಗಲಾಟೆಯಿಂದ ಮನನೊಂದ ಚೈತ್ರಾ ಈಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಯಾಣಿಕರೇ ಎಚ್ಚರ…

Related Articles

Back to top button