Latest

ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡಲು ಹಿಂದೂಗಳು ಸಂಘಟಿತರಾಗಬೇಕು; ಚಕ್ರವರ್ತಿ ಸೂಲಿಬೆಲೆ ಕರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ‘ಸದ್ಯ ಕ್ರೈಸ್ತರು ಮಾಡಿದ ಮತಾಂತರದಿಂದ ಅನೇಕ ಹಿಂದೂಗಳು ದೇವಾಲಯಗಳಿಗೆ ಹೋಗುವುದಿಲ್ಲ. ಹಾಗೆಯೇ ಅನೇಕ ದೇವಾಲಯಗಳನ್ನು ನಾಶ ಮಾಡಿ ಅಲ್ಲಿ ದೊಡ್ಡ ಮಾಲ್‌ಗಳನ್ನು ಕಟ್ಟಲಾಗಿದೆ. ಪುರಾತನ ದೇವಾಲಯಗಳನ್ನು ಪುನಃ ನಿರ್ಮಿಸುವ ಪ್ರಯತ್ನ ಮಾಡಲು ಯಾರೂ ಪ್ರಯತ್ನಿಸುತ್ತಿಲ್ಲ. ಬದಲಾಗಿ ನಾವೇ ಅವುಗಳನ್ನು ನಾಶ ಮಾಡುತ್ತಿದ್ದೇವೆ ಎಂದು ಬೆಂಗಳೂರಿನ ‘ಯುವಾ ಬ್ರಿಗೆಡ್’ನ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಕಳವಳ ವ್ಯಕ್ತಪಡಿಸಿದ್ದಾರೆ.

‘ದೇವಸ್ಥಾನಗಳ ಪಾವಿತ್ರ್ಯ ಮತ್ತು ರಕ್ಷಣೆಯ ದೃಷ್ಟಿಯಿಂದ ಅಭಿನವ ಉಪಕ್ರಮ : ದೇವಾಲಯಗಳ ಸ್ವಚ್ಛತೆ’ ಈ ಬಗ್ಗೆ ಗೋವಾದ ಫೋಂಡಾದಲ್ಲಿ 10 ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಮಾತನಾಡುತ್ತಿದ್ದರು.

ಆಕ್ರಮಣಕಾರರಿಂದ ದೇವಾಲಯಗಳನ್ನು ಪುನಃ ನಮ್ಮ ವಶಕ್ಕೆ ತೆಗೆದುಕೊಳ್ಳಬೇಕು. ಇದರೊಂದಿಗೆ ಹಿಂದೂಗಳನ್ನು ಬ್ರಾಹ್ಮಣ, ಲಿಂಗಾಯತ, ಮರಾಠಾ ಹೀಗೆ ಜಾತಿಗಳಿಂದ ಹೊರಗೆ ತೆಗೆದು ಕೇವಲ ಎಲ್ಲ ಹಿಂದೂಗಳ ದೇವಾಲಯಗಳು ಆಗಬೇಕು. ದೇವಾಲಯಗಳನ್ನು ಸ್ವಚ್ಛಗೊಳಿಸಲು ನಾವು ಯುವಾ ಬ್ರಿಗೆಡ್‌ನ ಮಾಧ್ಯಮದಿಂದ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ಸರಕಾರದ ಸ್ವಾಧೀನದಲ್ಲಿರುವ ದೇವಾಲಯಗಳನ್ನು ಪುನಃ ಪಡೆಯಬೇಕಿದ್ದರೆ, ಸರಕಾರದೊಂದಿಗೆ ಕಾನೂನುಬದ್ಧ ಮಾರ್ಗದಿಂದ ಹೋರಾಡಿ ದೇವಾಲಯಗಳನ್ನು ಹಿಂದಿರುಗಿ ಪಡೆಯಬೇಕಾಗುವುದು ಎಂದರು.

500-600 ವರ್ಷಗಳ ಹಿಂದಿನ ಅನೇಕ ಪುರಾತನ ದೇವಾಲಯಗಳ ಸ್ಥಳಗಳಲ್ಲಿ ಕೊಳಗಳಿವೆ; ಆದರೆ ಅವುಗಳಲ್ಲಿ ಕಸ ಮತ್ತು ಹೊಲಸನ್ನು ಎಸೆದು ಜನರೇ ಆ ಕೊಳಗಳನ್ನು ಹಾಳು ಮಾಡಿದ್ದಾರೆ. ಆದುದರಿಂದ ಬೆಂಗಳೂರಿನ ಯುವಾ ಬ್ರಿಗೆಡಿನ ವತಿಯಿಂದ ನಾವು ಈ ಕೊಳಗಳನ್ನು ಸ್ವಚ್ಛ ಮಾಡುವ ಅಭಿಯಾನವನ್ನು ಹಮ್ಮಿಕೊಂಡೆವು.

ಪ್ರತಿದಿನ 10-15 ಕಾರ್ಯಕರ್ತರು 2 ಗಂಟೆ ಮತ್ತು ರವಿವಾರ 50-60 ಜನರನ್ನು ಕರೆದುಕೊಂಡು ರಾಯಚೂರು ಮತ್ತು ಗದಗನಲ್ಲಿನ ಕೊಳಗಳ ಸ್ವಚ್ಛತೆಯನ್ನು ಮಾಡಿದರು. ಅನಂತರ 6 ವಾರಗಳಲ್ಲಿ ಕೊಳಗಳು ಮೊದಲಿನಂತೆ ಸ್ವಚ್ಛವಾದವು. ಅಲ್ಲಿ ನಾವು ದೀಪಾವಳಿ ಹಬ್ಬದಂತೆ ದೀಪಗಳನ್ನು ಬೆಳಗಿಸಿದೆವು. ಮೈಸೂರಿನ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಕೊಳದ ಸ್ವಚ್ಛತೆ ಮಾಡಿದೆವು. ಅಲ್ಲಿ ಪ್ರತಿದಿನ ಪೂಜೆಯನ್ನು ಮಾಡಲಾಗುತ್ತದೆ. ಉತ್ಸವ ಮತ್ತು ಜಾತ್ರೆಗಳಲ್ಲಿ ಜನರು ಸೇರುತ್ತಾರೆ. ಕೃಷ್ಣನ ಭಜನೆಗಳನ್ನು ಹಾಡಲಾಗುತ್ತದೆ. ಕೃಷ್ಣನ ದೇವಾಲಯವನ್ನು ಪುನರ್ಜಿವಿತ ಮಾಡಲಾಗಿದೆ ಎಂದು ವಿವರಿಸಿದರು.

ಕರ್ನಾಟಕದಲ್ಲಿ 8-10 ದೇವಾಲಯಗಳನ್ನು ಪುನರ್ಜೀವಿತ ಮಾಡಲಾಗಿದೆ. ಯುವಾ ಬ್ರಿಗೆಡ್‌ನ ವತಿಯಿಂದ ನಾವು ಕೊಳಗಳ ಸ್ವಚ್ಛತೆಯನ್ನು ಮಾಡಿದ ನಂತರ ನಾವು ಆಡಳಿತಾತ್ಮಕ ಅಧಿಕಾರಿಗಳನ್ನು ಭೇಟಿಯಾಗಿ ಕೊಳಗಳಲ್ಲಿ ಶುದ್ಧ ನೀರು ಬಿಡಲು ಆಗ್ರಹಿಸಿದೆವು, ಆದರೆ ಆಡಳಿತಾಧಿಕಾರಿಗಳು ನೀರು ಬಿಡಲು ನಿರಾಕರಿಸಿದರು. ಅನಂತರ ಅದೇ ದಿನ ಕೊಳಗಳ ಸ್ಥಳದಲ್ಲಿ ಧಾರಾಕಾರ ಮಳೆಯಾಯಿತು. ಆದುದರಿಂದ ಕೊಳಗಳಲ್ಲಿ ತಾನಾಗಿಯೇ ನೀರು ಬಂದಿತು.

ಇಲ್ಲಿ ಆಡಳಿತ ನಮ್ಮ ಕೈ ಬಿಟ್ಟರೂ; ದೇವರು ನಮ್ಮ ಕೈ ಬಿಡಲಿಲ್ಲ. ಈಶ್ವರನ ಕೃಪೆಯಾಯಿತು. ಕೊಳದ ಪುನರ್ನಿರ್ಮಾಣ ಮಾಡುವ ಪ್ರಯತ್ನ ಮಾಡಲಾಯಿತು. ಹಿಂದೂಗಳನ್ನು ಕಾರ್ಯಕ್ಕೆ ಜೋಡಿಸಿದೆವು ಮತ್ತು ನಂತರ ಹಿಂದೂಗಳು ದೇವಾಲಯಗಳೊಂದಿಗೆ ಜೋಡಿಸಲ್ಪಟ್ಟರು ಎಂದು ಹೇಳಿದರು.

ಈ ಸಮಯದಲ್ಲಿ ಭುವನೇಶ್ವರ (ಓಡಿಶಾ)ನ ಭಾರತ ರಕ್ಷಾ ಮಂಚ್‌ನ ಅನೀಲ ಧೀರ್, ‘ಸಿಬಿಐ’ನ ಮಾಜಿ ಮಹಾಸಂಚಾಲಕ ಶ್ರೀ ಎಮ್. ನಾಗೇಶ್ವರ ರಾವ್, ಸದ್ಗುರು ಶ್ರೀ. ನವನೀತಾನಂದ ಮಹಾರಾಜರು ಮತ್ತು ಮುಂಬಯಿಯ ನಿರಾಮಯ ಆಸ್ಪತ್ರೆಯ ಸಂಚಾಲಕರಾದ ಡಾ. ಅಮಿತ ಥಡಾನಿ ಇವರು ‘ದೇವಸ್ಥಾನಗಳ ಸರಕಾರಿ ನಿಯಂತ್ರಣಕ್ಕೆ ವಿರೋಧ’ ಈ ಚರ್ಚಾಕೂಟದಲ್ಲಿ ಪಾಲ್ಗೊಂಡರು.
ಜೂನ್ 20ರಂದು ಪ್ರಧಾನಿ ಮೋದಿ ಮೈಸೂರಿಗೆ; ಕಾರ್ಯಕ್ರಮಗಳ ವೇಳಾ ಪಟ್ಟಿ ಇಲ್ಲಿದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button