*ಹಿಂದೂ ಯುವಕರು ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ: ಎಷ್ಟು ದಿನ ಅಂತ ನಮ್ಮದೇ ಹೆಣ್ಣುಮಕ್ಕಳನ್ನು ನೋಡ್ತೀರಿ? ಎಂದ ಚಕ್ರವರ್ತಿ ಸೂಲಿಬೆಲೆ*

ಪ್ರಗತಿವಾಹಿನಿ ಸುದ್ದಿ: ಹಿಂದೂ ಯುವಕರು ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ವಿವಹವಾಗಿ ಎಂದು ಭಾಷಣಕಾರ, ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕುತ್ತಾರುವಿನಲ್ಲಿ ವಿಹೆಚ್ ಪಿ ಆಯೋಜಿಸಿದ್ದ ‘ಕೊರಗಜ್ಜನ ಆಡಿ ಕ್ಷೇತ್ರಕ್ಕೆ ನಮ್ಮ ನಡೆ’ ಎಂಬ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಎಲ್ಲಿಯವರೆಗೆ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಿರುತ್ತೀರಾ? ಸ್ವಲ್ಪ ಬದಲಾವಣೆ ತರೋಣ. ನಮ್ಮ ಗಂಡು ಮಕ್ಕಳಿಗೆ ಈ ಬಗ್ಗೆ ಹೇಳಬೇಕು ಎಂದಿದ್ದಾರೆ.
ಎಷ್ಟು ದಿನ ಅಂತಾ ನಮ್ಮ ಹೆಣ್ಣುಮಕ್ಕಳನ್ನು ನೋಡುತ್ತೀರಾ? ಹುಡುಗಿ ಸಿಗಲಿಲ್ಲ, ಹುಡುಗಿ ಸಿಗಲಿಲ್ಲ ಎಂದು ಎಷ್ಟು ದಿನ ಅಂತ ಹೇಳುತ್ತೀರಾ? ಸ್ವಲ್ಪ ಬೇರೆಯವರನ್ನು ನೋಡಿ. ನಾವು ನಮ್ಮ ಸಮಾಜದ ಗಂಡು ಮಕ್ಕಳಿಗೆ ಹೆಣ್ಣು ಸಿಕ್ಕಿಲ್ಲವೆಂದು ಯೋಚಿಸುವಾಗ ಪಕ್ಕದ ಸಮಾಜದಲ್ಲಿಯೂ ಸಮಸ್ಯೆ ಇದೆಯಲ್ಲವೇ? ಸ್ವಲ್ಪ ಧೈರ್ಯ ತುಂಬಿ…. ಎಂದು ಹೇಳುವ ಮೂಲಕ ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ವಿವಾಹವಾಗಿ ಎಂದಿದ್ದಾರೆ.
ಆರಂಭದಲ್ಲಿ ನಮ್ಮ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ಮೂಲಕ ಮದುವೆಆಗುತ್ತಿದ್ದರು, ಮತಾಂತರ ಮಾಡುತ್ತಿದ್ದರು. ಈಗ ಹಿಂದೂ ಯುವತಿಯರು ಎಚ್ಚೆತ್ತುಕೊಂಡಿದ್ದಾರೆ. ಹಾಗಾಗಿ ಈಗ ಹೆಸರನ್ನೇ ಬದಲಿಸಿಕೊಂಡು ಹಿಂದೂ ಹೆಸರು ಇಟ್ಟುಕೊಂದು ಪ್ರೀತಿಯ ನಾಟಕವಾಡಿ ಮತಾಂತರ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ