
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಭಾರತ ಧ್ವಜ ಹಿಡಿದು ಭಾರತ ತಂಡದ ಆಟಗಾರರಿಗಾಗಿ ಬೆಳಗಾವಿಯಲ್ಲಿ ವಿಶೇಷ ಪೂಜೆ ನೇರವೆರಿಸಲಾಗಿದೆ.
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಗಣೇಶ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗಿದೆ. ಬ್ಯಾಟಿಂಗ್, ಬೌಲಿಂಗ್, ಫಿಲ್ಡಿಂಗ್ ಎಲ್ಲ ಕ್ಷೇತ್ರದಲ್ಲೂ ಭಾರತ ತಂಡ ಬಲಿಷ್ಠವಾಗಿದೆ. ತಂಡದಲ್ಲಿ ಕೆ.ಎಲ್ ರಾಹುಲ್, ವರುಣ್ ಚಕ್ರವರ್ತಿ ಇಬ್ಬರು ಕನ್ನಡಿಗರಿದ್ದಾರೆ. ಭಾರತ ತಂಡ ಇಂದು ಗೆಲ್ಲುತ್ತದೆ ಎನ್ನುವ ನಮ್ಮ ನಿರೀಕ್ಷೆ ಹುಸಿ ಆಗಲ್ಲ. ಗೆದ್ದು ಬಾ ಭಾರತ ಎಂದು ಘೋಷಣೆ ಕೂಗಿ ಭಾರತ ತಂಡಕ್ಕೆ ಕರವೇ ಕಾರ್ಯಕರ್ತರು ಚೇರ್ ಅಪ್ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ