Kannada NewsKarnataka NewsLatest

*ಇಂದಿನಿಂದ ಚಾಮುಂಡಿ ಬೆಟ್ಟದಲ್ಲಿ ಹೊಸ ನಿಯಮ ಜಾರಿ; ನಿಮಯ ಉಲ್ಲಂಘಿಸಿದರೆ ಲೈಸನ್ಸ್ ರದ್ದು*

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಮಾಡಲು ಪಣತೊಟ್ಟಿರುವ ಮೈಸೂರು ಅರಣ್ಯ ಇಲಾಖೆ ಸಿಬ್ಬಂದಿಗಳು ಹೊಸ ನಿಯಮ ಜಾರಿಗೆ ತಂದಿದ್ದಾರೆ.

ಅರಣ್ಯ ಸಂರಕ್ಷಣಾ ಪ್ರಾಧಿಕಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಚಾಮುಂಡಿ ಬೆಟ್ಟಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲು ಭಕ್ತರು ಆಗಮಿಸುತ್ತಾರೆ. ಭಕ್ತರು ತಿನ್ನುವ ತಿಂಡಿ ಕವರ್, ಪೊಟ್ಟಣ, ಬಿಸ್ಕತ್ ಕವರ್, ನೀರಿನ ಬಾಟಲ್, ಜ್ಯುಸ್ ಬಾಟಲ್ ಗಳನ್ನು ರಸ್ತೆಯ ಇಕ್ಕೆಲೆಗಳಲ್ಲಿ, ಎಲ್ಲೆಂದರಲ್ಲಿ ಎಸೆಯುತ್ತಾರೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿಗಳು ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಮಾಡಲು ಇಂದಿನಿಂದ ಕಠಿಣ ನಿಯಮ ಜಾರಿ ಮಾಡಿದ್ದಾರೆ. ಪ್ಲಾಸ್ಟಿಕ್ ಬಿಸಾಕಿದರೆ 500 ರೂಪಾಯಿ ದಂಡ. ಮೊದಲ ಬಾರಿ ತ್ಯಾಜ್ಯ ಬಿಸಾಗಿದರೆ 2,500 ರೂಪಾಯಿ ದಂಡ, 2ನೇ ಬಾರಿ ಬಿಸಾಕಿದರೆ 5000 ರೂ ದಂಡ ಮೂರನೆ ಬಾರಿ 10,000 ರೂಪಾಯಿ ದಂಡ ಹಾಗೂ ಲೈಸನ್ಸ್ ರದ್ದು ಮಾಡಲಾಗುವುದು. ಈ ಬಗ್ಗೆ ಚಾಮುಂಡಿ ಬೆಟ್ಟದ ಅಂಗಡಿಯವರಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

ನಿರ್ಬಂಧಿತ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದರೆ 1000 ರೂಪಾಯಿ ದಂಡ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗುವುದು. ಮದ್ಯ ಹಾಗೂ ಮದಕ ವಸ್ತು, ಹಾನಿಕಾರಕ ವಸ್ತು ಸಾಗಿಸಿದರೆ 5 ಸಾವಿರ ದಂಡ ವಿಧಿಸಲಾಗುವುದು. ಕಾಡುಪ್ರಾಣಿಗಳಿಗೆ ಆಹಾರ ನೀಡಿದರೆ 1,000 ರೂಪಾಯಿ ದಂಡ ವಿಧಿಸಲಾಗುತ್ತಿದೆ.

Home add -Advt


Related Articles

Back to top button