Kannada NewsKarnataka News

ದೇವಿಯ ಪಾರಾಯಣದಿಂದ ಸರ್ವವೂ ಸಿದ್ಧಿಯಾಗುವುದು

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಚಿದಾನಂದ ಅವಧೂತರು ರಚಿಸಿರುವ ದೇವಿ ಪಾರಾಯಣದ 18 ಅಧ್ಯಾಯವನ್ನು ನಿತ್ಯ ಪಟಿಸಿದರೆ ಸರ್ವಸಿದ್ಧಿ ಲಭಿಸುವವು. ಅಷ್ಟೇ ಏಕೆ ಬೇಡಿದ ಇಷ್ಟಾರ್ಥವನ್ನು ಕೊಡುವ ಶಕ್ತಿ ದೇವಿ ಪಾರಾಯಣದಲ್ಲಿದೆ. ಈ ಪಾರಾಯಣವನ್ನು ಪ್ರತಿಯೊಬ್ಬರೂ ಮಾಡುವುದು ಅವರ ಬದುಕಿಗೆ ದಾರಿ ದೀವಿಗೆಯಾಗಿ ದೇವಿ ನಿಲ್ಲುತ್ತಾಳೆ ಎಂದು ಹುಕ್ಕೇರಿ ಹಿರೇಮಠದ  ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ದಸರಾ ಉತ್ಸವದ ಮರುದಿನ ದೇವಿ ಕ್ಷೇತ್ರಕ್ಕೆ ಪೂಜೆ ಪಾರಾಯಣವನ್ನು ಸಲ್ಲಿಸುವ ಕಾರ್ಯಕ್ರಮದಲ್ಲಿ ಬಡಕುಂದ್ರಿಯ ಹೊಳೆಮ್ಮ ದೇವಿ ದೇವಸ್ಥಾನಕ್ಕೆ ಮತ್ತು ಯರನಾಳದ ಕಾಳಿಕಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದರು.
ಯರನಾಳದ ಬ್ರಹ್ಮಾನಂದ ಅಜ್ಜನವರು  ಮಾತನಾಡಿ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ನಿರಂತರವಾಗಿ ರಾತ್ರಿ, ಮುಂಜಾವು, ಮಧ್ಯಾಹ್ನ ಶ್ರೀಗಳು ಮತ್ತು ಮೈಸೂರು ಶ್ರೀಗಳು, ಶಾಸ್ತ್ರಿಗಳು ಸೇರಿದಂತೆ 18 ಅಧ್ಯಾಯದ ದೇವಿ ಪಾರಾಯಣವನ್ನು ಮೂರು ಹೊತ್ತು ಮಾಡುವುದರ ಮುಖಾಂತರ ಚಂಡಿಕಾಯಾಗವನ್ನು ಮಾಡುವ ಮೂಲಕ ವಿಶೇಷವಾಗಿ ಭಕ್ತರಿಗೆ ಆಶೀರ್ವಾದವನ್ನು ನೀಡುತ್ತಿರುವುದು ಅಭಿಮಾನದ ಸಂಗತಿ ಎಂದರು.
 ಕರಿಯಮ್ಮ ದೇವಿಯ ಧರ್ಮದರ್ಶಿಗಳಾದ ಎಚ್.ಎಲ್ ಪೂಜಾರಿ ಗುರುಗಳು ಮಾತನಾಡುತ್ತಾ, ಹುಕ್ಕೇರಿ ಶ್ರೀಗಳಿಗೆ ದೇವಿ ಸ್ವತಃ ಬಂದು ಆಶೀರ್ವಾದ ಮಾಡುತ್ತಿದ್ದಾಳೆ. ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಎಂದರೆ ಅದು ಎಲ್ಲರಿಗೂ ತವರುಮನೆ ಇದ್ದಂತೆ. ಇಡೀ ಕರ್ನಾಟಕ ಮೈಸೂರು-ಬೆಂಗಳೂರು, ರಾಯಚೂರು ಹಲವಾರು ಕಡೆಯಿಂದ ಬಂದು ಭಕ್ತರು ಸೇವೆ ಮಾಡುತ್ತಾರೆ. ಅನೇಕ ಗುರುಗಳು ಬಂದು ಭಕ್ತರಿಗೆ ಹರಸುತ್ತಾರೆ. ಇದು ನಿಜಕ್ಕೂ ನಮ್ಮೆಲ್ಲರ ಭಾಗ್ಯ ಎಂದರು.
ಇದೇ ಸಂದರ್ಭದಲ್ಲಿ ಮುಕುಂದ ಮಠದ, ಮತ್ತು ಗೋಪಾಲ್ ಉಪಸ್ಥಿತರಿದ್ದರು. ಕಟಕೋಳ ಎಂ. ಚಂದರಗಿ ಹಿರೇಮಠದ ರೇಣುಕ ಗಡದೇಶ್ವರ ದೇವರು ಸೇರಿದಂತೆ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button