ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಹೋದರ ರಮೇಶ್ ಅವರ ಮಗ ಚಂದ್ರಶೇಖರ್ ಸಾವು ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಚಂದ್ರಶೇಖರ್ ಅಪಘಾತದಿಂದ ಸಾವನ್ನಪ್ಪಿಲ್ಲ. ಆತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ. ಅಲ್ಲದೇ ಕುಟುಂಬದವರು ಕೂಡ ಇದೊಂದು ಯೋಜಿತ ಕೊಲೆ ಎಂದು ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಚಂದ್ರಶೇಖರ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದು, ಈ ವೇಳೆ ಚಂದ್ರಶೇಖರ್ ನಾಪತ್ತೆಯಾದ ದಿನ ರಾತ್ರಿ ಒಂದೇ ನಂಬರ್ ನಿಂದ ನಿರಂತರವಾಗಿ ಅವರ ಮೊಬೈಲ್ ಗೆ ಕರೆ ಬಂದಿರುವುದು ಬೆಳಕಿಗೆ ಬಂದಿದೆ.
ವಿನಯ್ ಗುರೂಜಿ ಭೇಟಿಗೆಂದು ತೆರಳಿದ್ದ ಚಂದ್ರಶೇಖರ್ ಅ.30ರಂದು ರಾತ್ರಿ 10ಗಂಟೆ ವೇಳೆಗೆ ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿದ್ದರು. ಈ ವೇಳೆ ಚಂದ್ರಶೇಖರ್ ಮೊಬೈಲ್ ಗೆ ನಿರಂತರವಾಗಿ ಒಂದೇ ನಂಬರ್ ನಿಂದ 10ಕ್ಕೂ ಹೆಚ್ಚು ಬಾರಿ ಕರೆ ಬಂದಿದೆ.
ಪೊಲೀಸರು ಮೊಬೈಲ್ ನಂಬರ್ ಲೊಕೇಷನ್ ಪರಿಶೀಲನೆ ನಡೆಸಿದಾಗ ಅದು ಚಿಕ್ಕಮಗಳೂರಿನ ಕೊಪ್ಪದಿಂದ ಬಂದಿದ್ದಾಗಿ ತಿಳಿದುಬಂದಿದೆ. ಹಾಗಾದರೆ ಆ ನಂಬರ್ ಯಾರದ್ದು? ಕರೆ ಮಾಡಿದ್ದು ಯಾರು? ಚಂದ್ರಶೇಖರ್ ಅವರ ಸಾವಿಗೂ, ಈ ಕರೆಗೂ ಸಂಬಂಧವಿದೆಯೇ? ಎಂಬ ಅನುಮಾನ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬಂಡೆಮಠದಶ್ರೀ ಆತ್ಮಹತ್ಯೆ ಕೇಸ್; ಮೂವರು ಆರೋಪಿಗಳಿಗೆ ನ್ಯಾಯಾಂಗ ಬಂಧನ
https://pragati.taskdun.com/latest/bandemathashreesuicide-case3-accussedjudicial-custody/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ