Latest

ಭೂತಾಯಿ ಮಡಿಲು ಸೇರಿದ ಚಂದ್ರಶೇಖರ್ ಗುರೂಜಿ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರ ಅಂತ್ಯಕ್ರಿಯೆ ಹುಬ್ಬಳ್ಳಿಯ ಸುಳ್ಳ ಗ್ರಾಮದಲ್ಲಿ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ನೆರವೇರಿತು.

ನಿನ್ನೆ ಮಧ್ಯಾಹ್ನ ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಇಬ್ಬರು ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾಗಿದ್ದ ಚಂದ್ರಶೇಖರ್ ಗುರೂಜಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಇಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನಡೆಯಿತು. ಮರಣೋತ್ತರ ಪರೀಕ್ಷೆ ಬಳಿಕ ಕೇಶ್ವಾಪುರ ಬಳಿಯ ಸುಳ್ಳಾ ಗ್ರಾಮಕ್ಕೆ ಪಾರ್ಥಿವ ಶರಿರವನ್ನು ತರಲಾಯಿತು.

ಬಳಿಕ ಚಂದ್ರಶೇಖರ್ ಗುರೂಜಿ ಅಣ್ಣನ ಮಗ ಸಂತೋಷ್ ಅಂಗಡಿ, ಪಾರ್ಥಿವ ಶರೀರಕ್ಕೆ ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಪಾದಪೂಜೆ, ಮಹಾಮಂಗಳಾರತಿ, ಪುಷ್ಪಾರ್ಚನೆ ಮೂಲಕ ಅಂತಿಮ ವಿಧಿವಿಧಾನ ನೆರವೇರಿಸಿದರು. ಚಂದ್ರಶೇಖರ್ ಗುರೂಜಿ ಪತ್ನಿ ಅಂಕಿತಾ ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು. ಪಂಚಾಕ್ಷರಿ ಮಹಾ ಮಂತ್ರದೊಂದಿಗೆ ಕ್ರಿಯಾವಿಧಿ ನೆರವೇರಿಸಲಾಯಿತು.

ಬಳಿಕ ಗುರೂಜಿ ಪಾರ್ಥಿವಶರೀರವನ್ನು ಭೂತಾಯಿ ಒಡಲಲ್ಲಿ ಇಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಗುರೂಜಿ ಕುಟುಂಬದವರು, ಸಂಬಂಧಿಕರು, ಭಕ್ತರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು. ಚಂದ್ರಶೇಖರ್ ಗುರೂಜಿ ಮತ್ತೆ ಹುಟ್ಟಿಬನ್ನಿ ಎಂಬ ಘೋಷಣೆ ಕೂಗಲಾಯಿತು. ಮಾನವ ಗುರೂಜಿ ಎಂದೇ ಖ್ಯಾತರಾಗಿದ್ದ ಚಂದ್ರಶೇಖರ್ ಗುರೂಜಿ ಭೂತಾಯಿ ಮಡಿಲು ಸೇರಿದರು.
ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್;ಮರಣೋತ್ತರ ಪರೀಕ್ಷಾ ವರದಿ ಬಹಿರಂಗ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button