*ಚಂದ್ರಯಾನ-3; ಒಟ್ಟು 615 ಕೋಟಿ ವೆಚ್ಚ; ವಿಶೇಷತೆಗಳೇನು? ಏನೆಲ್ಲ ಅಧ್ಯಯನ ಮಾಡಲಿದೆ?*
ಪ್ರಗತಿವಾಹಿನಿ ಸುದ್ದಿ; ಶ್ರೀಹರಿಕೋಟಾ: ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಇಂದು ಮತ್ತೊಂದು ಐತಿಹಾಸ ನಿರ್ಮಾಣ ಮಾಡಿದೆ. ಚಂದ್ರಯಾನ-3 ಉಪಗ್ರಹಣ ಉಡಾವಣೆ ಮೂಲಕ ಚಂದ್ರನ ಅಂಗಳದಲ್ಲಿ ಹೊಸ ಚರಿತ್ರೆ ಬರೆಯಲು ಸಜ್ಜಾಗಿದೆ.
2019ರಲ್ಲಿ ಚಂದ್ರಯಾನ-2 ಮಿಷನ್ ವಿಫಲವಾಗಿತ್ತು. ಇದೀಗ ಎರಡನೇ ಪ್ರಯತ್ನದಲ್ಲಿ ಚಂದ್ರಯಾನ-3 ಮೂಲಕ ಇಸ್ರೋ ಮೃದುವಾಗಿ ಉಪಗ್ರಹವನ್ನು ಚಂದ್ರನ ಅಂಗಳದಲ್ಲಿ ಇಳಿಸುತ್ತಿದೆ. ಚಂದ್ರಯಾನ-3 ಮಿಷನ್ ವಿಫಲವಾಗುವ ಸಾಧ್ಯತೆ ಇಲ್ಲ. ಕಾರಣ ಮಾನವನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಲಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ತಿಳಿಸಿದ್ದಾರೆ.
ಚಂದ್ರಯಾನ -3 ಉಪಗ್ರಹವನ್ನು ಸುಮಾರು 615 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಂದ್ರಯಾನ -3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಗಳನ್ನು ಹೊತ್ತಿದೆ. ಇದು ಸುಮಾರು 3,900 ಕೆಜಿ ತೂಕವಿದೆ. ಇವುಗಳಿಗೆ ಸುಮಾರು 250 ಕೋಟಿ ವೆಚ್ಚವಾಗಿದೆ. ಉಡಾವಣೆಗೆ 365 ಕೋಟಿ ರೂ ವೆಚ್ಚವಾಗಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ತಿಳಿಸಿದ್ದಾರೆ.
ಮೂರು ಹಂತದ ವಿಶೇಷ ಸಾಮಾರ್ಥ್ಯ ಹೊಂದಿರುವ ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಭಾಗದ ಮೇಲ್ಮೈ ನಲ್ಲಿ ಲ್ಯಾಂಡ್ ಆಗಲಿದೆ. ಚಂದ್ರನ ಮೇಲಿನ ಕಂಪನದ ಬಗ್ಗೆ ಒಂದು ನೌಕೆ ಅಧ್ಯಯನ ನಡೆಸಲಿದೆ. ಎರಡನೇಯದು ಚಂದ್ರನ ಮೇಲ್ಮೈ ಉಷ್ಣಾಂಶದ ಬಗ್ಗೆ ಅಧ್ಯಯನ ನದೆಸಲಿದೆ. ಮೂರನೆಯದು ಪ್ಲಾಸ್ಮಾ ವಾತಾವರಣದ ಬಗ್ಗೆ ಅಧ್ಯನಯ ನಡೆಸುತ್ತದೆ. ನಾಲ್ಕನೆಯದು ಭೂಮಿ ಹಾಗೂ ಚಂದ್ರನ ಅಂತರವನ್ನು ನಿಖರವಾಗಿ ಅಳೆಯಲಿದೆ. ಇನ್ನು ಪ್ರಜ್ಞಾನ್ ಪೇ ಲೋಡ್ ಗಳು ಎಕ್ಸ್ ರೇ, ಲೇಸರ್ ಬಳಸಿ ಚಂದ್ರನ ಮೇಲ್ಮೈ ಅಧ್ಯಯನ ಮಾಡಲಿದೆ.
ಲ್ಯಾಂಡರ್ ನ ಎಲ್ಲಾ 4 ದಿಕ್ಕುಗಳಲ್ಲಿ ಒಟ್ಟು 8 ಸಣ್ಣ ಎಂಜಿನ್ ಗಳಿವೆ ಇದರಿಂದ ಹೇಗೆ ಬೇಕೋ ಹಾಗೇ ಲ್ಯಾಂಡ್ ಮಾಡಲು ಅನುಕೂಲವಾಗಲಿದೆ. ಇವುಗಳನ್ನು ಲ್ಯಾಂಡರ್ ಪ್ರೊಪಲ್ಶನ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ಇದರ ಸಹಾಯದಿಂದ ಲ್ಯಾಂಡರ್ ಚಂದ್ರನ ಮೇಲೆ ಇಳಿಯುತ್ತದೆ. ಸೆಕೆಂಡಿಗೆ 2 ಮೀಟರ್ ವೇಗದಲ್ಲಿ ಇಳಿಯುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ