Kannada NewsKarnataka NewsLatest
*ಚಂದ್ರಯಾನ-3: ವಿಕ್ರಮ್ ಲ್ಯಾಂಡರ್ ನಿಂದ ಪ್ರಜ್ಞಾನ್ ರೋವರ್ ಚಂದ್ರನಲ್ಲಿ ಇಳಿಯುತ್ತಿರುವ ವಿಡಿಯೋ ಬಿಡುಗಡೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾಗಿದ್ದು, ಚಂದ್ರನ ದಕ್ಷಿಣ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಅಲ್ಲದೇ ವಿಕ್ರಮ್ ಲ್ಯಾಂಡರ್ ನಲ್ಲಿದ್ದ ಪ್ರಜ್ಞಾನ್ ರೋವರ್, ಚಂದ್ರನ ಅಂಗಳದಲ್ಲಿ ಓಡಾಡುತ್ತಿದೆ. ಚಂದ್ರನ ಅಂಗಳದಲ್ಲಿ ಪ್ರಜ್ಞಾನ್ ರೋವರ್ ವಿಕ್ರಮ್ ಲ್ಯಾಂಡರ್ ನಿಂದ ಇಳಿಯುತ್ತಿರುವ ದೃಶ್ಯವನ್ನು ಇಸ್ರೋ ಬಿಡುಗಡೆಮಾಡಿದೆ.
ಪ್ರಜ್ಞಾನ್ ರೋವರ್ ನಿಧಾನವಾಗಿ ಇಳಿಯುತ್ತಿರುವ ದೃಶ್ಯ ಹಾಗೂ ಚಂದ್ರನ ಮೇಲ್ಮೈ ಮೇಲೆ ಇರುವ ಕುಳಿಗಳು, ರೋವರ್ ಚಲಿಸಿದ ಮಾರ್ಗದಲ್ಲಿ ಮೂಡಿದ ಗುರುತುಗಳು ಸೆರೆಯಾಗಿವೆ.
ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಲ್ಯಾಂಡ್ ಆದ 3 ಗಂಟೆಯ ಬಳಿಕ ಪ್ರಜ್ಞಾನ್ ರೋವರ್ ವಿಕ್ರಮ್ ನಿಂದ ಹೊರಬಂದು ಚಂದ್ರನ ಅಂಗಳದಲ್ಲಿ ರಥಯಾತ್ರೆ ಆರಂಭಿಸಿದೆ. ಗುರುವಾರ ರಾತ್ರಿಯಿಂದಲೇ ಲ್ಯಾಂಡರ್ ಹಾಗೂ ರೋವರ್ ಚಂದ್ರನಲ್ಲಿ ಅಧ್ಯಯನ ಆರಂಭಿಸಿವೆ. 7 ಉಪಕರಣಗಳು, 7 ವಿಷಯಗಳ ಬಗ್ಗೆ ಅಧ್ಯಯನ ನಡೆಸುತ್ತಿವೆ.