ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಉರ್ದು ಮಾತನಾಡಿಲ್ಲ ಎಂಬ ಕಾರಣಕ್ಕೆ ಯುವಕನ ಹತ್ಯೆ ಎಂದು ಖಾಸಗಿ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಸುದ್ದಿ ನ್ಯೂಸ್ ಕ್ಲಿಪ್ ಗೆ ಹೋಲುವ ವಿಡಿಯೋ ಫೇಸ್ ಬುಕ್, ವಾಟ್ಸಪ್ ಗಳಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ಕರ್ನಾಟಕ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಜೆಜೆ ನಗರದಲ್ಲಿ ಯುವಕ ಚಂದ್ರು ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲೀಂ ಏರಿಯಾಗೆ ಬಂದು ಉರ್ದು ಮಾತನಾಡಿಲ್ಲ ಎಂದು ಯುವಕನನ್ನು ಕೊಂದ ಕಿರಾತಕರು ಎಂಬ ಶೀರ್ಷಿಕೆಯಡಿ ಖಾಸಗಿ ಸುದ್ದಿವಾಹಿನಿಯೊಂದರ ವಿಡಿಯೋವನ್ನು ಪ್ರತಿನಿಧಿಸುವ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಈ ಬಗ್ಗೆ ಗಮನಕ್ಕೆ ಬಂದಿದ್ದು, ಇದು ಸತ್ಯಕ್ಕೆ ದೂರವಾದದ್ದು ಎಂದು ಕರ್ನಾಟಕ ರಾಜ್ಯ ಪೊಲೀಸ್ ಟ್ವಿಟರ್ ನಲ್ಲಿ ತಿಳಿಸಿದೆ.
ಮುಸ್ಲಿಂ ಏರಿಯಾಗೆ ಬಂದು ಉರ್ದು ಮಾತಾಡಿಲ್ಲ ಅಂತಾ ಕೊಂದ ಕಿರಾತಕರು: ಎಂಬ ಸ್ಯೂಸ್ ಕ್ಲಿಪ್ ನ ಬಗ್ಗೆ ಸತ್ಯ ಸಂಗತಿಗಳುhttps://t.co/afkgXbE6YO
— Karnataka State Police Factcheck (@kspfactcheck) April 6, 2022
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ