Kannada NewsKarnataka NewsLatestPolitics
ಲೋಕಸಭಾ ಚುನಾವಣೆ ಉಸ್ತುವಾರಿಗಳ ಬದಲಾವಣೆ: ಚಿಕ್ಕೋಡಿಗೆ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರವಾರು ನೇಮಕ ಮಾಡಲಾಗಿದ್ದ ಉಸ್ತುವಾರಿಗಳಲ್ಲಿ ಕೆಲವು ಬದಲಾವಣೆ ಮಾಡಿ ಎಐಸಿಸಿ ಹೊಸ ಪಟ್ಟಿ ಬಿಡುಗಡೆ ಮಾಡಿದೆ.
ಹೊಸ ಪಟ್ಟಿಯ ಪ್ರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಚಿಕ್ಕೋಡಿ ಉಸ್ತುವಾರಿ ನೀಡಲಾಗಿದೆ. ಚಿಕ್ಕೋಡಿ ಉಸ್ತುವಾರಿಯಾಗಿದ್ದ ಎಚ್.ಕೆ.ಪಾಟೀಲ ಅವರಿಗೆ ಹಾವೇರಿ ಉಸ್ತುವಾರಿ ನೀಡಲಾಗಿದೆ. ಹಾವೇರಿ ಉಸ್ತುವಾರಿಯಾಗಿದ್ದ ಶಿವಾನಂದ ಪಾಟೀಲ ಅವರಿಗೆ ಕೊಕ್ ನೀಡಲಾಗಿದೆ.
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬದಲಾವಣೆ ಮಾಡಲಾಗಿದ್ದು, ಎಐಸಿಸಿ ಈ ಹೊಸ ಪಟ್ಟಿಗೆ ಒಪ್ಪಿಗೆ ನೀಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ.
ಹೊಸ ಪಟ್ಟಿ ಇಲ್ಲಿದೆ –


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ