
ಪ್ರಗತಿವಾಹಿನಿ ಸುದ್ದಿ: ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಮಟ್ಕಾ ದಂಧೆ ಆರೋಪಿ ಆದಿಲ್ ಲಾಕಪ್ ನಲ್ಲಿ ಸಾವನ್ನಪ್ಪಿಲ್ಲ ಬದಲಾಗಿ ಆತನಿಗೆ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.
ಮೇ 24ರಂದು ಇಡೀ ರಾಜ್ಯದಲ್ಲೇ ಸುದ್ದಿಯಾಗಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮಟ್ಕಾ ದಂಧೆ ಆರೋಪಿ ಆದಿಲ್ ಸಾವು ಪ್ರಕರಣ ಸಂಬಂಧ ಆರೋಪಿಯ ಲಾಕಪ್ ಡೆತ್ ಆಗಿಲ್ಲ, ಬದಲಾಗಿ ಆತನಿಗೆ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.
ಪೊಲೀಸ್ ಠಾಣೆಯಲ್ಲಿದ್ದ ಆರೋಪಿ ಆದಿಲ್ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ಆದಿಲ್ ಮನೆಯವರು ಇದು ಸಹಜ ಸಾವಲ್ಲ, ಲಾಕಪ್ ಡೆತ್ ಎಂದು ಗಂಭೀರ ಆರೋಪ ಮಾಡಿದ್ದರು. 30ಕ್ಕೂ ಹೆಚ್ಚು ಜನರಿಂದ ಕಲ್ಲು ತೂರಾಟ ನಡೆದಿತ್ತು. ಆ ವೇಳೆ ಠಾಣೆಯ ಕಿಟಕಿ, ಗಾಜು ಒಡೆದು ಪೊಲೀಸ್ ವಾಹನಗಳಿಗೆ ಹಾನಿ ಮಾಡುವಷ್ಟರ ಮಟ್ಟಿಗೆ ಘಟನೆ ತಿರುವು ಪಡೆದಿತ್ತು. ವಿರೋಧ ಪಕ್ಷಗಳು ಈ ಘಟನೆಯನ್ನು ರಾಜಕೀಯವಾಗಿ ಟೀಕಿಸಿದ್ದವು.
ಇದೀಗ ಮರಣೋತ್ತ ಪರೀಕ್ಷೆಯ ವರದಿ ಬಂದಿದ್ದು, ಹೃದಯಾಘಾತದಿಂದ ಆದಿಲ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇನ್ನು ಜಡ್ಜ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ವರದಿಯಾಗಿದೆ. ಸದ್ಯ ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ