Kannada NewsKarnataka News

ಕಿತ್ತೂರು ಉತ್ಸವದಲ್ಲಿ ಚನ್ನಮ್ಮ ಪೋಸ್ಟಲ್ ಕವರ್ ಬಿಡುಗಡೆ

 ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಈ ಭಾರಿ ನಡೆಯಲಿರುವ ಐತಿಹಾಸಿಕ ಕಿತ್ತೂರು ಉತ್ಸವದಲ್ಲಿ ಚನ್ನಮ್ಮಾಜಿಯ ಭಾವ ಚಿತ್ರವಿರುವ ಪೋಸ್ಟಲ್ ಕವರನ್ನು ಬಿಡುಗಡೆಗೊಳಿಸಲಾಗುವದು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ಪಟ್ಟಣದ ರಾಜಗುರು ಸಂಸ್ಥಾನ ಕಲ್ಮಠದ ಚಂದರಗಿ ಸಭಾ ಮಂಟಪದಲ್ಲಿ ಶುಕ್ರವಾರ ನಡೆದ ವಿವಿಧ ಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವದ ಯಶಸ್ಸಿಗಾಗಿ ಎಲ್ಲ ಸಮಿತಿ ಸದಸ್ಯರ ಹಾಗೂ ಸ್ಥಳಿಯರ ಸಹಕಾರ ಅಗತ್ಯ, ಕಾರಣ ಎಲ್ಲ ಉಪಸಮಿತಿಯ ಸದಸ್ಯರು ಸ್ವಯಂಪ್ರೇರಿತರಾಗಿ ಉತ್ಸವದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಹೇಳಿದರು.

ಸಮೀತಿ ಸದಸ್ಯರ ಒತ್ತಾಯದ ಮೇರೆಗೆ ಈ ಭಾರಿಯೂ ಉತ್ಸವದಲ್ಲಿ ಸೈಕ್ಲಿಂಗ್ ಕ್ರೀಡೆಯನ್ನು ನಡೆಸಲಾಗುವುದು. ಸ್ಪರ್ಧಾಳುಗಳು ಕೂಡಲೇ ತಮ್ಮ ಹೆಸರನ್ನು ಸಂಬಂಧಪಟ್ಟ ಕ್ರೀಡಾ ಇಲಾಖೆಯಲ್ಲಿ ನೊಂದಾಯಿಸಬೇಕೆಂದು ತಿಳಿಸಿದರು.
ಕಿತ್ತೂರು, ಎಮ್.ಕೆ.ಹುಬ್ಬಳ್ಳಿ ಹಾಗೂ ಬೈಲಹೊಂಗಲದ ಪಂಚಾಯಿತಿ ಅಧಿಕಾರಿಗಳು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮೂಬೈಲ್ ಬಂದ್ ಇಡುವುದಾಗಲಿ ಹಾಗೂ ಬೇಜವ್ದಾರಿಯಿಂದ ವರ್ತಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಖಡಕ್ಕಾಗಿ ಸೂಚಿಸಿದರು.

ನಂತರ ಮಾತನಾಡಿದ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ, ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಎಲ್ಲ ವ್ಯವಸ್ಥೆಯನ್ನು ಕೈಗೊಂಡಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಹೇಳಿದರು.

ಪ್ಲಾಸ್ಟಿಕನಿಂದ ತಯಾರಿಸಲಾದ ಯಾವುದೇ ಪ್ಲೆಕ್ಸ್ ಗಳನ್ನು ಹಾಕುವಂತಿಲ್ಲ. ಹಾಗೇನಾದರೂ ಹಾಕಿದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು  ಬಟ್ಟೆಯಲ್ಲಿ ತಯಾರಾದ ಪ್ಲೇಕ್ಸಗಳನ್ನು ಹಾಕುವವರು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವೆಂದು ತಿಳಿಸಿದರು.
ಪ್ರತಿವರ್ಷ ಉತ್ಸವದಲ್ಲಿ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ಕುಸ್ತಿಪಟುಗಳು ಮಾತ್ರ ಭಾಗವಹಿಸುತ್ತಿದ್ದರು. ಈ ಭಾರಿ ಅಂತರಾಷ್ಟ್ರೀಯ ಕುಸ್ತಿ ಪಟುಗಳಿಗೆ ಆಹ್ವಾನ ನೀಡಲಾಗಿದ್ದು ಕ್ಯೂಬಾ ಹಾಗೂ ಇರಾನ್ ದೇಶದ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಿ ಮೂರು ದಿನಗಳ ಕಾಲ ನಡೆಯುವ ಉತ್ಸವವನ್ನು ಯೂ ಟ್ಯೂಬ್ ಲೈವ್ ನೀಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ದೇಶಾದ್ಯಂತ ಎಲ್ಲರೂ ಉತ್ಸವವನ್ನು ಯೂ ಟ್ಯೂಬ್ ನಲ್ಲಿ ವೀಕ್ಷಿಸಬಹುದೆಂದು ಹೇಳಿದರು.
ತಹಶೀಲ್ದಾರ ಪ್ರವೀಣ ಜೈನ್ ಇವರು ವಿವಿಧ ಸಮಿತಿಗಳ ಸದಸ್ಯರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ವಿವಿಧ ಸಮಿತಿಗಳ ಎಲ್ಲ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button