
ಪ್ರಗತಿವಾಹಿನಿ ಸುದ್ದಿ: ಚಲಿಸುತ್ತಿದ್ದ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಅವಘಡ ಸಂಭವಿಸಿರುವ ಘಟನೆ ಬೀದರ್ ಜಿಲ್ಲೆರ್ಯ ಕಪ್ಪಿಕೆರೆ ಬಳಿ ನಡೆದಿದೆ.
ಕಲ್ಯಾಣ ಕರ್ನಾಟಕ ರಸ್ತೆಸಾರಿಗೆ ಸಂಸ್ಥೆ ಬಸ್ 25ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಬೀದರ್ ಕಡೆಯಿಂದ ಬರುತ್ತಿದ್ದ ಬಸ್ ಔರಾದ್ ಕಡೆಗೆ ತೆರಳುತ್ತಿತ್ತು. ಈ ವೇಳೆ ಬಸ್ ನ ಎಂಜಿನ್ ನಲ್ಲಿ ದ್ದಟ್ಟ ಹೊಗೆ ಕಾಣಿಸಿಕೂಂಡಿದೆ. ತಕ್ಷಣ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರನ್ನು ಇಳಿಯುವಂತೆ ಸೂಚಿಸಿದ್ದಾರೆ.
ಪ್ರಯಾಣಿಕರು ಬಸ್ ಇಳಿದ ಕೆಲವೇ ಕ್ಷಣಗಳಲ್ಲಿ ಬಸ್ ತುಂಬೆಲ್ಲ ಬೆಂಕಿ ಆವರಿದ್ದು, ಧಗದಗನೆ ಹೂತ್ತಿ ಉರಿದಿದೆ. ಇಡೀ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕರ ಜೀವ ಉಳಿದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.