Kannada NewsKarnataka NewsLatest
ಶೇ.50 ಮಹಿಳಾ ಮೀಸಲಾತಿ, ಗ್ರಾಮ ಸಭೆಗಳಿಗೆ ಶಕ್ತಿ ತುಂಬುವ ಕೆಲಸಗಳನ್ನು ಮಾಡಿದ್ದೇ ಕಾಂಗ್ರೆಸ್ – ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸವದತ್ತಿ ತಾಲೂಕಿನ ಯರಜರ್ವಿ, ಕಡಬಿ, ಕೊಟೂರ, ತಲ್ಲೂರ ಗ್ರಾಮಗಳಲ್ಲಿ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಮತಯಾಚಿಸಿದರು.
ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಉತ್ಸಾಹದಿಂದ ಕಣಕ್ಕಿಳಿದಿದ್ದೇನೆ. ಕಾಂಗ್ರೆೆಸ್ ಸರಕಾರ ಜಾರಿಗೆ ತಂದಿರುವ ನರೇಗಾ ಯೋಜನೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಪಂಚಾಯಿತಿ ವ್ಯವಸ್ಥೆ ಉಳಿಯಲು ಅವಕಾಶವಾಗಿದೆ. ಶೇ.50 ಮಹಿಳಾ ಮೀಸಲಾತಿ, ಗ್ರಾಮ ಸಭೆಗಳಿಗೆ ಶಕ್ತಿ ತುಂಬುವ ಕೆಲಸಗಳನ್ನು ಮಾಡಿದ್ದೇ ಕಾಂಗ್ರೆಸ್. ಈ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಅದಕ್ಕಾಗಿ ನಿಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ನನಗೆ ನೀಡಿ ಎಂದು ಅವರು ವಿನಂತಿಸಿದರು.
ಈ ಸಂದರ್ಭಗಳಲ್ಲಿ ಆಯಾ ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು, ಮುಖಂಡರು, ವಿಶ್ವಾಸ್ ವೈದ್ಯ, ವಿಕ್ರಮ ದೇಸಾಯಿ, ವಿನಯ ದೇಸಾಯಿ, ಮಹಾಂತೇಶ ಉಪ್ಪಿನ, ಡಿ ಡಿ ಟೋಪೋಜಿ, ಮಹಾಂತೇಶಣ್ಣ ಮತ್ತಿಕೊಪ್ಪ, ನೀಲಕಂಠ ಸಿದ್ದಬಸನ್ನವರ, ಸುರೇಶಗೌಡ ಬಾಡಗಿಗೌಡರ, ಕಾಶೀಮ್ ಸಾಬ್ ಜಮಾದಾರ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ