Belagavi NewsBelgaum NewsKannada NewsKarnataka News
ಪೇವರ್ಸ್ ಅಳವಡಿಕೆ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಖಾನಾಪುರ ತಾಲೂಕಿನ ಬಿಜಗರ್ಣಿ ಗ್ರಾಮದ ರಾಜಾರಾಮ ಶಿಂದೆ ಇವರ ಮನೆಯಿಂದ ಶಿವಾಜಿ ಮೂರ್ತಿಯವರೆಗೆ ಫೇವರ್ಸ್ ಅಳವಡಿಕೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಂಗಳವಾರ ಚಾಲನೆ ನೀಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ 2025-26 ನೇ ಸಾಲಿನ ಬಂಡವಾಳ ವೆಚ್ಚ ಲೆಕ್ಕ ಶೀರ್ಷಿಕೆ ಯೋಜನೆಯಡಿ ಸುಮಾರು 10 ಲಕ್ಷ ರೂ,ಗಳ ವೆಚ್ಚದಲ್ಲಿ ಫೇವರ್ಸ್ ಅಳವಡಿಕೆಯ ಕಾಮಗಾರಿ ನಡೆಯಲಿದೆ.
ಈ ವೇಳೆ ಯಶವಂತ ಬಿರ್ಜೆ, ಮಹಾದೇವ ಗಾಡಿ, ಜ್ಯೋತಿಬಾ ಗುರವ, ಸಾತೇರಿ ಬೆಳವಟ್ಕರ್, ಇರ್ಫಾನ್ ತಾಳಿಕೋಟಿ, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ದುರ್ವಾ ಸುತಾರ್, ಉಪಾಧ್ಯಕ್ಷರಾದ ಗುಂಜಪ್ಪ ಮಿರಾಸಿ ಸೇರಿದಂತೆ ಸರ್ವ ಸದಸ್ಯರು, ಗ್ರಾಮಸ್ಥರು ಇದ್ದರು.