Cancer Hospital 2
Laxmi Tai Society2
Beereshwara add32

ಸಿಎಂ, ಡಿಸಿಎಂ, ಸಚಿವ ಸಂಪುಟಕ್ಕೆ ಧನ್ಯವಾದ ಸಲ್ಲಿಸಿದ ಚನ್ನರಾಜ ಹಟ್ಟಿಹೊಳಿ

Anvekar 3

​ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವಣ್ಣನವರನ್ನು ‘ ಸಾಂಸ್ಕೃತಿಕ ನಾಯಕ ‘ ಎಂದು ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರವರಿಗೆ ಹಾಗೂ ಕಾರಣೀರ್ತರಾದ ಎಲ್ಲ ಸಂಪುಟ ಸಚಿವರಿಗೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.

ವಿಶ್ವಗುರು, ಜಗಜ್ಯೋತಿ ಶ್ರೀ ಬಸವಣ್ಣನವರನ್ನು ರಾಜ್ಯ ಸರ್ಕಾರ ‘ಸಾಂಸ್ಕ್ರತಿಕ ನಾಯಕ’ ಎಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ​ಮಂಗಳವಾರ ಬೆಳಗಾವಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಕೈಗೊಂಡು, ಗೌರವ ನಮನ ಸಲ್ಲಿ​ಸಿ ಅವರು ಮಾತನಾಡಿದರು.

Emergency Service

ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ನಮ್ಮ ಸರ್ಕಾರ ಶರಣ ತತ್ವ ಪಾಲನೆಗೆ ಕಟಿಬದ್ಧವಾಗಿದೆ.​ ಬಸವಣ್ಣನವರ ಭಾವಚಿತ್ರವನ್ನು ವಿಧಾನ ಸೌಧದಲ್ಲಿ ಇಂದು ಅನಾವರಣಗೊಳಿಸಲಾಗಿದೆ ಹಾಗೂ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಬೇಕು ಎಂದು ಆದೇಶಿಸಲಾಗಿದೆ.​ ​ಬಸವಣ್ಣನವರನ್ನು ‘ ಸಾಂಸ್ಕೃತಿಕ ನಾಯಕ ‘ ಎಂದು ಘೋಷಣೆ ಮಾಡಿರುವ ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ, ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರವರಿಗೆ ಹಾಗೂ ಕಾರಣೀರ್ತರಾದ ಎಲ್ಲ ಸಂಪುಟ ಸಚಿವರಿಗೆ ಧನ್ಯವಾದ ಸ​ಲ್ಲಿಸುಸುತ್ತೇವೆ. ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಇದರಿಂದ ಕರ್ನಾಟಕ ರಾಜ್ಯದ ಹೆಸರು ವಿಶ್ವದಲ್ಲೇ ​ಬೆಳಗಲಿದೆ, ಜತೆಗೆ ಬಸವಣ್ಣನವರು ಕಂಡ ಕನಸು ನನಸಾಗಲಿದೆ. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ನಾವು ಮನಪೂರ್ವಕವಾಗಿ ಸ್ವಾಗತಿಸುತ್ತೇವೆ​ ಎಂದು​ ಅವರು ಹೇಳಿದರು.

ಈ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಿರಣ ಸಾಧುನವರ, ಮೋಹನ ರೆಡ್ಡಿ, ಬಸವರಾಜ ಶೇಗಾಂವಿ, ರಾಜಾಸಲೀಂ ಖಾಸೀಮನವರ ಹಾಗೂ ಮಹಿಳಾ ಕಾಂಗ್ರೆಸ್ ​ಪ​ದಾದಿಕಾರಿಗಳು ಉಪಸ್ಥಿತರಿದ್ದರು.

​ 

Gokak Jyotishi add 8-2
Bottom Add3
Bottom Ad 2

You cannot copy content of this page