Kannada NewsKarnataka NewsNational

*40 ಕೋಟಿಯ ಚರಸ್ ವಶಕ್ಕೆ ಪಡೆದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಗುಜರಾತ್‌ನ ಕಛ್ ಹಾಗೂ ಪೋರ್‌ಬಂದ‌ರ್ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿ ₹40 ಕೋಟಿ ಮೌಲ್ಯದ 87 ಪ್ಯಾಕೆಟ್ ಚರಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

ಈ ಪೈಕಿ ಕಝ್ ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ₹40 ಕೋಟಿಗೂ ಹೆಚ್ಚು ಮೌಲ್ಯದ 81 ಚರಸ್‌ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ಸೋಮವಾರ ಮಾತ್ರ, 40 ಪ್ಯಾಕೆಟ್ ವಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಗದೊಂದು ಪ್ರಕರಣದಲ್ಲಿ ಪೋರ್‌ಬಂದರ್‌ನ ಪೊಲೀಸರು, ಓಡಾದರ್‌ ತೀರ ಪ್ರದೇಶದಿಂದ ಆರು ಪ್ಯಾಕೆಟ್ ಚರಸ್ ವಶಪಡಿಸಿಕೊಂಡಿದ್ದಾರೆ. ಡ್ರೋನ್ ಹಾಗೂ ಗುಪ್ತಚರ ಕಾರ್ಯಾಚರಣೆ ತೀವ್ರಗೊಳಿಸಿರುವ ಪೊಲೀಸರು, ಕಳೆದ ಕೆಲವು ದಿನಗಳಲ್ಲಿ ಕಭ್, ದೇವಭೂಮಿ ದ್ವಾರಕಾ ಹಾಗೂ ಪೋರ್‌ಬಂದರ್‌ನಲ್ಲಿ 200ಕ್ಕೂ ಹೆಚ್ಚು ಡ್ರಗ್ಸ್ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ.

ಕಳೆದ 10 ದಿನಗಳಲ್ಲಿ ದೇವಭೂಮಿ ದ್ವಾರಕಾದಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ₹62 ಕೋಟಿ ಮೌಲ್ಯದ 115 ಪ್ಯಾಕೇಟ್ ಚರಸ್ (124 ಕೆ.ಜಿ) ವಶಪಡಿಸಿಕೊಳ್ಳಲಾಗಿತ್ತು.

Related Articles

Back to top button